April 20, 2025
IMG-20250417-WA0005-800x450

ಬೆಂಗಳೂರು: ಕ್ವೀನ್ಸ್ ರಸ್ತೆಯ ರಾಜೀವ್ ಗಾಂಧಿ ಕಾಲೋನಿಯಲ್ಲಿ ನಡೆದ ಅಶ್ಲೀಲ ವರ್ತನೆಯೊಂದು ತೀವ್ರ ಪ್ರತಿಭಟನೆಯ ಕಾರಣವಾಗಿದೆ. ಏಪ್ರಿಲ್ 13ರಂದು ರಾತ್ರಿ 10.30ರ ಸುಮಾರಿಗೆ ಮಹಿಳೆಯೊಬ್ಬರು ಮಲಗಲು ಎರಡನೇ ಮಹಡಿಗೆ ತೆರಳುತ್ತಿದ್ದಾಗ, ಎದುರು ಮನೆಯ ಕಾರ್ತಿಕ್ ಎಂಬಾತ ಅವಾಚ್ಯ ವರ್ತನೆ ತೋರಿದ್ದಾನೆ. ಆತನು ತನ್ನ ಪ್ಯಾಂಟ್ ಬಿಚ್ಚಿ, ಅಶ್ಲೀಲವಾಗಿ ವರ್ತಿಸಿದ್ದಲ್ಲದೇ, ಆಕೆಯನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದಾನೆ.

ಮಹಿಳೆ ತಕ್ಷಣವೇ ತನ್ನ ಪತಿಯನ್ನು ಕರೆದು ಸಹಾಯಕ್ಕಾಗಿ ಕೂಗಿದ್ದಾರೆ. ಇದರ ನಡುವೆ ಕಾರ್ತಿಕ್ ರೊಚ್ಚಿಗೆದ್ದು, ಮಹಿಳೆ ಮತ್ತು ಆಕೆಯ ಪತಿಯ ಮೇಲೆ ದೌರ್ಜನ್ಯ ಎಸಗಿದ್ದಾನೆ. ಸ್ಥಳೀಯರು ಜಗಳವನ್ನು ಅಡಗಿಸಲು ಬಂದಾಗ, ಕಾರ್ತಿಕ್ ಅವರ ಮೇಲೆಯೂ ಹಲ್ಲೆ ನಡೆಸಿದ್ದಾನೆ. ಆತನು ಕೈಗೆ ಸಿಕ್ಕ ವಸ್ತುಗಳನ್ನು ಉಪಯೋಗಿಸಿ ಅನೇಕರ ಮೇಲೆ ಹಲ್ಲೆ ಮಾಡಿದ ಆರೋಪವಿದೆ.

ಈ ಘಟನೆಯಲ್ಲಿ ಒಟ್ಟು ಏಳು ಮಂದಿ ಗಾಯಗೊಂಡಿದ್ದು, ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕಾರ್ತಿಕ್ ತಾಯಿಗೂ ಗಾಯಗಳಾಗಿದ್ದು, ಅವರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಆರೋಪಿಯನ್ನು ಬಂಧಿಸಲು ಪೊಲೀಸ್ ಕಾರ್ಯಾಚರಣೆ ಮುಂದುವರಿದಿದೆ.

error: Content is protected !!