August 6, 2025
841511498269272

ಮಲ್ಪೆ: ಸಮುದ್ರದಲ್ಲಿ ಯಾವುದೇ ರೀತಿಯ ಅನುಮಾನಾಸ್ಪದ ಬೋಟುಗಳ ಚಲನವಲನಗಳು ಅಥವಾ ಅಪರಿಚಿತ ವ್ಯಕ್ತಿಗಳ ಕಾಣಿಸಿಕೊಂಡು ಬರುವಿಕೆಯಿದ್ದರೆ, ತಕ್ಷಣವೇ ಭಾರತೀಯ ನೌಕಾ ಪಡೆ, ಕರಾವಳಿ ಭದ್ರತಾ ಪಡೆಯವರು ಮತ್ತು ಮೀನುಗಾರಿಕಾ ಇಲಾಖೆಗೆ ಮಾಹಿತಿ ನೀಡಬೇಕೆಂದು ಜಂಟಿ ನಿರ್ದೇಶಕ ವಿವೇಕ್ ಆರ್. ತಿಳಿಸಿದ್ದಾರೆ.

ಮೀನುಗಾರರು ಸಮುದ್ರದಲ್ಲಿ ಯಾರು ನಿರ್ದಿಷ್ಟವಲ್ಲದ ವ್ಯಕ್ತಿಗಳನ್ನು ಅಥವಾ ನಡುಗುಡ್ಡೆಗಳ ಮೇಲೆ ಚಲನವಲನಗಳನ್ನು ನೋಡಿದರೆ, ತಕ್ಷಣ ಇಲಾಖೆಗೆ ಮಾಹಿತಿ ನೀಡಬೇಕಾಗಿದೆ. ಟ್ರಾನ್ಸ್‌ಪಾಂಡರ್‌ಗಳನ್ನು ಸದಾ ಸಕ್ರಿಯವಾಗಿಟ್ಟುಕೊಂಡು, ‘ನಭಾಮಿತ್ರ’ ಆಪ್ ಮುಖಾಂತರ ಮಾಹಿತಿಯನ್ನು ಹಂಚಿಕೊಳ್ಳುವುದು ಅಗತ್ಯ.

ಸಮುದ್ರದ ಭದ್ರತೆ ದೃಷ್ಟಿಯಿಂದ, ಮೀನುಗಾರಿಕೆ ಮಾಡುವಾಗ 2 ಅಥವಾ 3 ಬೋಟುಗಳು ಸಮೂಹವಾಗಿ ಕಾರ್ಯನಿರ್ವಹಿಸುವುದು ಸೂಕ್ತ. ವಿಶೇಷವಾಗಿ ರಾತ್ರಿ ವೇಳೆ ಮೀನುಗಾರಿಕೆ ಮಾಡುವಾಗ ಅಥವಾ ಲಂಗರು ಹಾಕಿರುವ ಸಂದರ್ಭದಲ್ಲಿ, ನ್ಯಾವಿಗೇಶನಲ್ ಲೈಟನ್ನು ಸಕ್ರಿಯಗೊಳಿಸಬೇಕು.

ರಕ್ಷಣಾ ಸಿಬ್ಬಂದಿ ಸಮುದ್ರದಲ್ಲಿ ತಪಾಸಣೆ ನಡೆಸಿದಾಗ, ಸಂಪೂರ್ಣ ಸಹಕಾರ ನೀಡಬೇಕು. ಪ್ರತಿಯೊಬ್ಬರೂ ಕ್ಯೂಆರ್ ಕೋಡ್ ಇರುವ ಆಧಾರ್ ಕಾರ್ಡ್, ನೋಂದಣಿ ಪ್ರಮಾಣ ಪತ್ರ, ಮೀನುಗಾರಿಕೆ ಪರವಾನಗಿ ಮತ್ತು ಇತರ ಅಗತ್ಯ ದಾಖಲೆಗಳನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು.

ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಿರುವುದು ಸುರಕ್ಷಿತ ಕ್ರಮ ಎಂದು ಅವರು ತಿಳಿಸಿದರು.

error: Content is protected !!