March 14, 2025
2025-01-28 114056

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುಂಪಲ ಗ್ರಾಮವು ಸತತ ಐದು ವರ್ಷಗಳಿಂದ ಅಕಾಲಿಕ ಸಾವುಗಳು ಮತ್ತು ದಿಢೀರ್ ಅನಾರೋಗ್ಯದಿಂದ ಬಳಲುತ್ತಿದೆ. ಇದರಿಂದಾಗಿ, ಗ್ರಾಮದ ಜನರು ಭಯದಿಂದ ಬಾಳುತ್ತಿದ್ದಾರೆ. 2019ರಿಂದ 2024ರ ವರೆಗೆ ಗ್ರಾಮದಲ್ಲಿ ಐವತ್ತಕ್ಕೂ ಹೆಚ್ಚು ಅಕಾಲಿಕ ಸಾವುಗಳು ಸಂಭವಿಸಿದ್ದು, ಇದರಲ್ಲಿ ಯುವಕರ ಮತ್ತು ಯುವತಿಯ ಆತ್ಮಹತ್ಯೆಗಳು, ಅಪಘಾತಗಳು, ಹಾಗೂ ಅನಾರೋಗ್ಯದಿಂದಾದ ಸಾವುಗಳು ಹೆಚ್ಚಿನ ಪ್ರಮಾಣದಲ್ಲಿವೆ.

ಸಾವು-ನೋವು ತಡೆಗಟ್ಟಲು ಮಹಾಮೃತ್ಯುಂಜಯ ಯಾಗ:
ಕುಂಪಲದ ಕೇಸರಿ ಮಿತ್ರ ವೃಂದ ಸಂಘಟನೆ ನೇತೃತ್ವದಲ್ಲಿ, ಗ್ರಾಮಸ್ಥರು ಇಂದು (ಜನವರಿ 27) ಆದಿಶಕ್ತಿ ಚಾಮುಂಡೇಶ್ವರಿ ದೇವಾಲಯದ ಸಾನಿಧ್ಯದಲ್ಲಿ ಮಹಾಮೃತ್ಯುಂಜಯ ಯಾಗವನ್ನು ನಡೆಸುತ್ತಿದ್ದಾರೆ. ಈ ಯಾಗವನ್ನು, ದೈವದ ಕೃಪೆ ಹಾಗೂ ಗ್ರಾಮದ ಒಳಿತಿಗಾಗಿ ಆಯೋಜಿಸಲಾಗಿದೆ.

ಸರಣಿ ಸಾವುಗಳು:
2019 ರಿಂದ 2024ರ ಅವಧಿಯಲ್ಲಿ, ಗ್ರಾಮದಲ್ಲಿ 50ಕ್ಕೂ ಹೆಚ್ಚು ಅಕಾಲಿಕ ಸಾವುಗಳು ನಡೆದಿವೆ. ಈ ಸಾವುಗಳಲ್ಲಿ ಆತ್ಮಹತ್ಯೆ, ಅಪಘಾತ, ಹಾಗೂ ಅನಾರೋಗ್ಯದಿಂದ ಉಂಟಾದ ದಿಢೀರ್ ಸಾವಿನ ಪ್ರಕರಣಗಳು ಹೆಚ್ಚು ಕಂಡುಬಂದಿವೆ. ಹೆಚ್ಚಿನವು ಯುವಕ-ಯುವತಿಯ ಸಾವಿನ ಪ್ರಕರಣಗಳಾಗಿವೆ, ಇದರಿಂದ ಗ್ರಾಮಸ್ಥರಲ್ಲಿ ಭಾರೀ ಆತಂಕ ಮೂಡಿದೆ.

ಪ್ರಶ್ನಾ ಚಿಂತನೆಯಲ್ಲಿ ದೈವದ ಸುಳಿವು:
ಸಾವು-ನೋವಿನ ಹಿಂದೆ ದೈವದ ಅಸಾಮಧಾನವಿರುವ ಸಾಧ್ಯತೆ ಬಗ್ಗೆ ಪ್ರಶ್ನಾ ಚಿಂತನೆಯಲ್ಲಿ ಸುಳಿವು ದೊರಕಿದ್ದು, ಪೂರ್ವದಲ್ಲಿ ದೈವ ಸಾನಿಧ್ಯವೊಂದರಲ್ಲಿ ನಡೆಯುತ್ತಿದ್ದ ಸೇವೆಗಳು ನಿಂತಿರುವುದು ಈ ಸಮಸ್ಯೆಗೆ ಕಾರಣವೆಂದು ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಿದೆ.

ದೈವ ಸಾನಿಧ್ಯ ಇನ್ನು ಪತ್ತೆಯಾಗಿಲ್ಲ:
ದೈವಕ್ಕೆ ಕಾಲಾದಿ ಸೇವೆಗಳು ಸಲ್ಲಿಕೆಯಾಗುತ್ತಿದ್ದ ಮಾಹಿತಿ ಲಭ್ಯವಾಗಿದೆ. ಆದರೆ ಯಾವುದೋ ಕಾರಣಕ್ಕೆ ಅದು ನಿಂತು ಹೋಗಿದ್ದು, ಸದ್ಯ ಆ ಸಾನಿಧ್ಯದ ಬಗ್ಗೆ ಪ್ರಶ್ನಾ ಚಿಂತನೆಯಲ್ಲಿ ಸುಳಿವು ಸಿಕ್ಕಿತ್ತು. ದೈವ ಸಾನಿಧ್ಯ ಇನ್ನೂ ಪತ್ತೆಯಾಗಿಲ್ಲ ದೈವ ಸಾನಿಧ್ಯ ಪತ್ತೆಗೂ ಮೊದಲು ಗ್ರಾಮದ ಒಳಿತಿಗೆ, ಸಾವುಗಳನ್ನು ತಡೆಗಟ್ಟಲು ಮಹಾಮೃತ್ಯುಂಜಯ ಯಾಗ ನಡೆಸಲು ತೀರ್ಮಾನಿಸಲಾಗಿದೆ.