
ಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಬಿರುಸಿನ ಗಾಳಿ ಮತ್ತು ಮಳೆಯು ಮುಂದುವರಿದಿರುವ ಹಿನ್ನೆಲೆ, ಮೇ 26ರ ಸೋಮವಾರಕ್ಕೆ ಜಿಲ್ಲೆಯ ಎಲ್ಲ ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ.
ತೀವ್ರ ಮಳೆಯ ಹಿನ್ನೆಲೆಯಲ್ಲಿ, ಮಕ್ಕಳ ಸುರಕ್ಷತೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಗಾಳಿ-ಮಳೆ ತೀವ್ರವಾಗಿರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ನಡೆದುಕೊಳ್ಳುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಇದಲ್ಲದೆ, ಮಕ್ಕಳ ಸುರಕ್ಷತಿಯನ್ನು ಮನನದಲ್ಲಿಟ್ಟುಕೊಂಡು, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯು ಜಿಲ್ಲೆಯ ಎಲ್ಲ ಮದರಸಾ ಆಡಳಿತ ಮಂಡಳಿಗಳು ಹಾಗೂ ಸದರ್ ಉಸ್ತಾದರಿಗೆ ಮೇ 26ರಂದು ಮದರಸಗಳಿಗೆ ರಜೆ ನೀಡುವ ಕುರಿತು ತೀರ್ಮಾನ ಕೈಗೊಳ್ಳುವಂತೆ ಶಿಫಾರಸು ಮಾಡಿದೆ.