August 7, 2025
ppp

ಬೆಳ್ತಂಗಡಿ: ಸಂಚಾರದಲ್ಲಿದ್ದ ಬೈಕ್ ಮೇಲೆ ಮರದ ಕೊಂಬೆ ಬಿದ್ದು, ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡು ಮೃತಪಟ್ಟ ದುರ್ಘಟನೆ ಬೆಳ್ತಂಗಡಿಯ ಗೇರುಕಟ್ಟೆ ಜಾರಿಗೆಬೈಲು ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.

ಮೃತಪಟ್ಟವರು ಬೆಳಾಲು ಗ್ರಾಮದ ನಿವಾಸಿ ಪುನೀತ್ (25) ಎಂದು ಗುರುತಿಸಲಾಗಿದೆ.

ಪುನೀತ್ ಮಂಗಳೂರಿನ ಖಾಸಗಿ ಬ್ಯಾಂಕಿನಲ್ಲಿ ಲೋನ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಗುರುವಾರ ಎಂದಿನಂತೆ ಕೆಲಸ ಮುಗಿಸಿ, ಬೈಕ್‌ನಲ್ಲಿ ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಮೂಲಕ ಮನೆಗೆ ತೆರಳುತ್ತಿದ್ದರು. ಆದರೆ ಜಾರಿಗೆಬೈಲು ಎಂಬಲ್ಲಿ ಬರುತಿದ್ದಾಗ ರಸ್ತೆ ಬದಿಯ ಮರದ ಕೊಂಬೆಯೊಂದು ಏಕಾಏಕಿ ಮುರಿದು ಅವರ ಬೈಕ್ ಮೇಲೆಯೇ ಬಿದ್ದಿದೆ, ಪರಿಣಾಮ ಪ್ರವೀಣ್ ಗಂಭೀರವಾಗಿ ಗಾಯಗೊಂಡಿದ್ದರು.


ಅವರ ಸಹಾಯಕ್ಕೆ ಸ್ಥಳೀಯರು ಧಾವಿಸಿ ಆಸ್ಪತ್ರೆ ಗೆ ಕೊಂಡೋಯ್ದರೂ, ಗಂಭೀರ ಗಾಯಗೊಂಡ ಪುನೀತ್ ತಕ್ಷಣವೇ ಅಸ್ವಸ್ಥಗೊಂಡು ಕೊನೆಯುಸಿರೆಳೆದರು. ಈ ಘಟನೆಯ ಕುರಿತಂತೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!