August 3, 2025
liquor

ಬೆಂಗಳೂರು: ಮದ್ಯದಂಗಡಿ ಮಾಲಕರಿಗೆ ಡಬಲ್ ಸಂತೋಷ ನೀಡುವಂತೆ ಕರ್ನಾಟಕ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಮೊದಲು ಶೇಕಡಾ 100 ರಷ್ಟು ಹೆಚ್ಚಿಸಿದ್ದ ಅಬಕಾರಿ ಪರವಾನಿಗೆ ಶುಲ್ಕವನ್ನು ಈಗ ಶೇಕಡಾ 50ಕ್ಕೆ ಇಳಿಸಲಾಗಿದೆ. ಇದರಿಂದ ಮದ್ಯದ ಅಂಗಡಿ ಮಾಲಕರಿಗೆ ನಿಟ್ಟುಸಿರು ಬಿಡುವಂತಾಗಿದೆ.

ಇದು ಮಾತ್ರವಲ್ಲದೆ, ವರ್ಷಕ್ಕೊಮ್ಮೆ ನಡೆಸಲಾಗುತ್ತಿದ್ದ ನಿಯಂತ್ರಕ ತಪಾಸಣೆಯನ್ನು ಈಗ ಐದು ವರ್ಷಕ್ಕೊಮ್ಮೆ ನಡೆಸುವಂತೆ ಮಾಡಲು ಸರ್ಕಾರ ಯೋಜನೆ ರೂಪಿಸಿದೆ. ಎರಡನೇ ವಾರದ ಹಿಂದೆ ಮದ್ಯದ ಅಂಗಡಿ ಮಾಲಕರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿದ್ದರು.

ಮಧ್ಯಂತರ, ಸರ್ಕಾರ ಇದ್ದಕ್ಕಿದ್ದಂತೆ ಅಬಕಾರಿ ಪರವಾನಿಗೆ ಶುಲ್ಕವನ್ನು ಶೇಕಡಾ 100ರಷ್ಟು ಹೆಚ್ಚಿಸಿದ್ದ ವಿಚಾರದಿಂದ ಮದ್ಯದಂಗಡಿ ಮಾಲಕರಲ್ಲಿ ಆಕ್ರೋಶ ತಲೆದೋರಿತ್ತು. ಅವರು ಪ್ರತಿಭಟನೆ ಕೂಡ ನಡೆಸಲು ಸಿದ್ಧರಾಗಿದ್ದರು.

ಮಾಲಕರ ಒತ್ತಡಕ್ಕೆ ಮಣಿದ ಸರ್ಕಾರ ಇದೀಗ ಅಬಕಾರಿ ಪರವಾನಿಗೆ ನವೀಕರಣ ಶುಲ್ಕವನ್ನು ಶೇಕಡಾ 50ರಷ್ಟು ಕಡಿಮೆ

error: Content is protected !!