
ನಟ ದರ್ಶನ್ ಅವರಿಗೆ ಮತ್ತೊಂದು ಭಾರೀ ಶಾಕ್ ಎದುರಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಮತ್ತು ಜಾಮೀನಿನಲ್ಲಿ ಬಿಡುಗಡೆಯಾದ ದರ್ಶನ್ ಅವರ ಗನ್ಗಳನ್ನು ಆರ್.ಆರ್.ನಗರ ಪೊಲೀಸರು ಸೀಜ್ ಮಾಡಿದ್ದಾರೆ.
ಈ ಕ್ರಮವು ದರ್ಶನ್ ಅವರ ಗನ್ ಲೈಸೆನ್ಸ್ ಹಾಗೂ ಅವರ ಗುಣಾತ್ಮಕ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು, ಕಾನೂನು ಪ್ರಕ್ರಿಯೆ ಪ್ರಕಾರ ಕೈಗೊಳ್ಳಲಾಗಿದ್ದು, ಇನ್ನಷ್ಟು ವಿಚಾರಣೆ ಮುಂದುವರಿಯುತ್ತದೆ.
‘ನನಗೆ ಗನ್ ಬೇಕು’ ಎಂದ ನಟ ದರ್ಶನ್: ನಾನೊಬ್ಬ ನಟನಾಗಿರೋದ್ರಿಂದ ನನಗೆ ಗನ್ ಅವಶ್ಯಕತೆ ತುಂಬಾ ಇದೆ. ನಾನು ಹೋದ ಕಡೆ.. ಬಂದ ಕಡೆ ಸಾಕಷ್ಟು ಜನ ಸೇರಿರ್ತಾರೆ. ನನ್ನ ಆತ್ಮ ರಕ್ಷಣೆಗಾಗಿ ಗನ್ ಬೇಕು ಎಂದಿದ್ರು ದರ್ಶನ್.. ಹೀಗಂತ ಪೊಲೀಸರ ನೋಟಿಸ್ಗೆ ಉತ್ತರ ನೀಡಿ ದಾಸ ಮನವಿ ಮಾಡಿದ್ರು.