
ಬೆಂಗಳೂರು: 2024-25ನೇ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದೆ. ಈ ಬಾರಿ ರಾಜ್ಯದ ಒಟ್ಟು ಉತ್ತೀರ್ಣತಾ ಶೇಕಡಾವಾರು 73.45% ರಷ್ಟಾಗಿದೆ.
ಒಟ್ಟು 6,81,079 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರೆ, ಅವರಲ್ಲಿ 4,68,439 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಜಿಲ್ಲೆಯಮಟ್ಟದಲ್ಲಿ ಉಡುಪಿಯು ಅತ್ಯುತ್ತಮ ಸಾಧನೆ ಮಾಡುವ ಮೂಲಕ 93.90% ಫಲಿತಾಂಶದೊಂದಿಗೆ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆ 93.57% ಫಲಿತಾಂಶದೊಂದಿಗೆ ಎರಡನೇ ಸ್ಥಾನಕ್ಕೇರಿದ್ದರೆ, ಬೆಂಗಳೂರು ದಕ್ಷಿಣ 85.36% ಫಲಿತಾಂಶದೊಂದಿಗೆ ಮೂರನೇ ಸ್ಥಾನ ಪಡೆದಿದೆ. ಯಾದಗಿರಿ ಜಿಲ್ಲೆ 73.45% ಫಲಿತಾಂಶದೊಂದಿಗೆ ಈ ಬಾರಿ ಕೊನೆಯ ಸ್ಥಾನದಲ್ಲಿದೆ.
ಶ್ರೇಣಿಗಳವಾರು ಉತ್ತೀರ್ಣರಾದ ವಿದ್ಯಾರ್ಥಿಗಳ ವಿವರ:
- ಉನ್ನತ ಶ್ರೇಣಿ: 1,00,571 ಮಂದಿ
- ಪ್ರಥಮ ದರ್ಜೆ: 2,78,054 ಮಂದಿ
- ದ್ವಿತೀಯ ದರ್ಜೆ: 70,969 ಮಂದಿ
- ತೃತೀಯ ದರ್ಜೆ: 18,845 ಮಂದಿ
ಇಂದು ಮಧ್ಯಾಹ್ನ 12:45ಕ್ಕೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪಿಯು ಮಂಡಳಿಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ನಂತರ ಮಧ್ಯಾಹ್ನ 1:30ಕ್ಕೆ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಫಲಿತಾಂಶ ವೀಕ್ಷಿಸಲು ವೆಬ್‌ಸೈಟ್: www.karresults.nic.in