
ಕುಂದಾಪುರ: ಅಕ್ರಮ ಕೆಂಪು ಕಲ್ಲು ಸಾಗಾಟ – ಟಿಪ್ಪರ್ ವಶ, ಪ್ರಕರಣ ದಾಖಲು
ಕುಂದಾಪುರ ಸಮೀಪದ ದೂಪದಕಟ್ಟೆ ಜಂಕ್ಷನ್ನಲ್ಲಿ ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಮಿನಿ ಟಿಪ್ಪರ್ವೊಂದನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ದಿನಾಂಕ 22/06/2025 ರಂದು ಸಂಜೆ ಭೀಮಾಶಂಕರ ಸಿನ್ನೂರ, ಪೊಲೀಸ್ ಉಪನಿರೀಕ್ಷಕರು (ಎಲ್ & ಓ), ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಸ್ತು ಕಾಯ್ದುಹಿಡಿದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಅಂಪಾರು ಕಡೆಯಿಂದ ಕಂಡ್ಲೂರು ಕಡೆಗೆ ಸಾಗುತ್ತಿದ್ದ ಮಿನಿ ಟಿಪ್ಪರ್ (ನಂ. KA-20-B-7633) ಅನ್ನು ತಪಾಸಣೆ ನಡೆಸಿದಾಗ, ಯಾವುದೇ ಕಾನೂನುಬದ್ಧ ಪರವಾನಿಗೆ ಇಲ್ಲದೆ 200 ಕೆಂಪು ಕಲ್ಲುಗಳನ್ನು ಸಾಗಾಟ ಮಾಡುತ್ತಿದ್ದು ಪತ್ತೆಯಾಗಿದೆ.
ಟಿಪ್ಪರ್ ಚಾಲಕ ಶ್ರೀನಾಥ್ (37) ಎಂಬುವರು ಆಗಿದ್ದು, ವಾಹನ ಮಾಲಿಕ ನಾಗು ಎಂಬುದಾಗಿ ತಿಳಿದುಬಂದಿದೆ. ಚಾಲಕರಿಂದ ವಿಚಾರಣೆ ನಡೆಸಿದಾಗ, ಕಲ್ಲುಗಳನ್ನು ಹೊಸಂಗಡಿಯ ಎಡಮೊಗ್ಗೆ ಪ್ರದೇಶದಿಂದ ತುಂಬಿಸಿಕೊಂಡು ಬಂದಿರುವ ಮಾಹಿತಿ ಲಭ್ಯವಾಗಿದೆ.
ಪೊಲೀಸರು ಟಿಪ್ಪರ್ ಜೊತೆಗೆ ಕಲ್ಲು ಕತ್ತರಿಸುವ ಯಂತ್ರ, ಕೆಂಪು ಕಲ್ಲು ಕೀಳುವ ಯಂತ್ರ ಮತ್ತು ಸ್ಥಳದಲ್ಲಿದ್ದ JCB (ನಂ. KA-20-D-553) ವಾಹನವನ್ನು ಸಹ ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 37/2025ರಂತೆ BNS ಕಲಂ 303 (2), 112 ಹಾಗೂ MMDR Act 4, 4(1)(a), 21 ವಿಧಿಗಳಡಿ ಪ್ರಕರಣ ದಾಖಲಾಗಿದೆ.