
ಉಡುಪಿ: ಕಾರ್ಕಳದ (Karkala) ನಿಟ್ಟೆ ದೂಪದಕಟ್ಟೆ ಬಳಿ ಉದ್ಯಮಿ ಒಬ್ಬರು ತಮ್ಮ ಕಾರಿನೊಳಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ದಿಲೀಪ್ ಎನ್.ಆರ್ ಎಂದು ಗುರುತಿಸಲಾಗಿದೆ. ಅವರು ಮಂಗಳೂರಿನಲ್ಲಿ ಸಣ್ಣ ಮಟ್ಟದ ಉದ್ಯಮ ನಡೆಸುತ್ತಿದ್ದರು. ವ್ಯಾಪಾರದಲ್ಲಿ ನಷ್ಟ ಮತ್ತು ಹೆಚ್ಚಿನ ಸಾಲದ ಒತ್ತಡವೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗುತ್ತಿದೆ.
ದಿಲೀಪ್ ತಮ್ಮ ಕುಟುಂಬದ ಜೊತೆ ಮಂಗಳೂರಿನಲ್ಲಿ ವಾಸವಿದ್ದರು. ಈ ದುರ್ಘಟನೆ ಕಳೆದ ತಡರಾತ್ರಿ ಅಥವಾ ಬೆಳಗಿನ ಜಾವ ಸಂಭವಿಸಿದೆ. ಕಾರಿನೊಳಗೆ ಸ್ವೀಟ್ ಬಾಕ್ಸ್ ಹಾಗೂ ರಿವಾಲ್ವರ್ ಕೂಡ ಪತ್ತೆಯಾಗಿದೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ.