
ಕಾಪು: ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರು ತಮ್ಮ ಕುಟುಂಬ ಸಮೇತ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಮಾರಿಯಮ್ಮನ ದರ್ಶನ ಪಡೆದರು.
ಇತ್ತೀಚೆಗಷ್ಟೇ ಬ್ರಹ್ಮಕಲಶೋತ್ಸವದ ಮೂಲಕ ನವೀಕರಿಸಲ್ಪಟ್ಟ ಈ ದೇವಾಲಯದ ಶಿಲ್ಪಕಲೆಯನ್ನು ಅವರು ಆಸಕ್ತಿಯಿಂದ ವೀಕ್ಷಿಸಿದರು. ದೇಗುಲದ ಅಭಿವೃದ್ಧಿ ಮತ್ತು ವ್ಯವಸ್ಥಾಪನಾ ಸಮಿತಿಗಳ ವತಿಯಿಂದ ಅವರಿಗೆ ಸನ್ಮಾನ ಸಲ್ಲಿಸಲಾಯಿತು.
ಮೂಲತಃ ಮುಲ್ಕಿಗೆ ಸೇರಿದ ಸುನಿಲ್ ಶೆಟ್ಟಿ ಅವರು, ಬಪ್ಪನಾಡು ದುರ್ಗಾಪರಮೇಶ್ವರಿ ದೇವಾಲಯದಲ್ಲಿ ನಡೆಯುತ್ತಿರುವ ಉತ್ಸವದ ಸಂದರ್ಭ ತಾಯಿಯವರೊಂದಿಗೆ ಭೇಟಿ ನೀಡಿದ್ದರು. ಅವರ ಜೊತೆ ಸಂಬಂಧಿಕರೂ ಇದ್ದರು.
ಈ ಸಂದರ್ಭದಲ್ಲಿ ದೇವಾಲಯದ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯಾ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಉಪಸ್ಥಿತರಿದ್ದರು.