August 7, 2025
Screenshot_20250618_1706042-640x320

ಉಡುಪಿ: ಬಸ್‌ ಚಾಲಕನ ಹುಚ್ಚಾಟದ ಚಾಲನೆ – ವಿಡಿಯೋ ವೈರಲ್, ಪೊಲೀಸರು ಪ್ರಕರಣ ದಾಖಲಿಸಿ ಬಂಧನ

ಉಡುಪಿ ನಗರದಲ್ಲಿ ಖಾಸಗಿ ಬಸ್‌ ಚಾಲಕನ ಅಪಾಯಕಾರಕ ಚಾಲನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಹಿನ್ನೆಲೆಯಲ್ಲಿ, ನಗರ ಸಂಚಾರ ಪೊಲೀಸರು ಆರೋಪಿಗೆ ವಿರುದ್ಧ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೆ, ಬಸ್‌ನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತನನ್ನು ದೇವರಾಜ್ ಎಂದು ಗುರುತಿಸಲಾಗಿದೆ. ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಪ್ರಕರಣದ ವಿವರ:

2025ರ ಜೂನ್ 17ರಂದು ಸಂಜೆ 4:30ರ ಸಮಯದಲ್ಲಿ, ಕರಾವಳಿ-ಉಡುಪಿ ಮಾರ್ಗದ ರಾಹೆ-169A ರಸ್ತೆಯಲ್ಲಿ ದೇವರಾಜ್ ಎಂಬ ವ್ಯಕ್ತಿ KA20D8236 ಸಂಖ್ಯೆಯ ‘ಶ್ರೀ ದುರ್ಗಾಂಬ’ ಖಾಸಗಿ ಬಸ್‌ನ್ನು ವೇಗವಾಗಿ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸುತ್ತಿದ್ದನು. ಈ ಸಂದರ್ಭ ಬನ್ನಂಜೆ ಜಯಲಕ್ಷ್ಮೀ ಸಿಲ್ಕ್ ಬಳಿ ಬಸ್ ನಿಯಂತ್ರಣ ತಪ್ಪಿ ತಿರುಗಿ ನಿಂತು, ಬಳಿಕ ದೇವರಾಜ್ ಬಸ್ಸನ್ನು ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿ ಉಡುಪಿಯತ್ತ ಸಾಗಿದ್ದಾನೆ.

ಭಾಗ್ಯವಶಾತ್, ಬಸ್ಸಿನಲ್ಲಿ ಇದ್ದ ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ.

ಈ ಸಂಬಂಧ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 72/2025ರಂತೆ IPC ಸೆಕ್ಷನ್ 281 ಹಾಗೂ BNS 184, 188, 218 ಜೊತೆಗೆ 177ರ IMV ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಚಾಲಕ ದೇವರಾಜ್‌ನನ್ನು ಬಂಧಿಸಿ ಬಸ್ಸು ವಶಕ್ಕೆ ಪಡೆಯಲಾಗಿದೆ.

error: Content is protected !!