August 5, 2025
post_image

ಜೈಪುರ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ತವರಿನಲ್ಲಿ ಸೋತ ನಂತರ, ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಸೋಲಿನ ಪ್ರಮುಖ ಕಾರಣಗಳ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಪಂದ್ಯ ನಂತರ ಮಾತನಾಡಿದ ಅವರು, “ನಾವು ಉತ್ತಮ ಮೊತ್ತ ಕಾಯ್ದಿದ್ದರೂ, ಪವರ್ ಪ್ಲೇ ಅವಧಿಯಲ್ಲಿಯೇ ಪಂದ್ಯವು ನಮ್ಮ ಕೈ ತಪ್ಪಿತು. ಅದರಲ್ಲೂ ಕಳಪೆ ಫೀಲ್ಡಿಂಗ್, ವಿಶೇಷವಾಗಿ ಕೈ ತಪ್ಪಿದ ಕ್ಯಾಚ್‌ಗಳು ಎದುರಾಳಿ ತಂಡಕ್ಕೆ ಬಲ ನೀಡಿದವು,” ಎಂದು ವಿಷಾದ ವ್ಯಕ್ತಪಡಿಸಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಆರಂಭದಲ್ಲಿ ಸ್ಪಷ್ಟವಾದ ಸವಾಲುಗಳು ಎದುರಾದವು. ಆರಂಭ ನಿದಾನವಾಗಿದ್ದರೂ, ಯಶಸ್ವಿ ಜೈಸ್ವಾಲ್ (75), ರಿಯಾನ್ ಪರಾಗ್ (30), ಹಾಗೂ ಧ್ರುವ್ ಜುರೆಲ್ (35) ಅವರ ಉತ್ತಮ ಆಟದ ನೆರವಿನಿಂದ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 173 ರನ್ ಗಳಿಸಿತು.

ಆದರೆ ಪವರ್ ಪ್ಲೇ ಅವಧಿಯಲ್ಲಿಯೇ ತಂಡ ನಿರ್ಣಾಯಕ ಅವಕಾಶಗಳನ್ನು ಕಳೆದುಕೊಂಡಿತು. ನಾಲ್ಕನೇ ಓವರ್‌ನಲ್ಲಿ ವಿರಾಟ್ ಕೊಹ್ಲಿಗೆ ರಿಯಾನ್ ಪರಾಗ್ ನೀಡಿದ ಕ್ಯಾಚ್ ಕೈ ತಪ್ಪಿದರೆ, ಜೈಸ್ವಾಲ್ ಕೂಡಾ ಫಿಲಿಪ್ ಸಾಲ್ಟ್ ನೀಡಿದ ಕ್ಯಾಚ್‌ನ್ನು ಹಿಡಿಯಲಾಗಲಿಲ್ಲ. ಈ ತಪ್ಪುಗಳು ಪಂದ್ಯದ ಪಲಿತಾಂಶದ ಮೇಲೆ ಪರಿಣಾಮ ಬೀರಿದವು.

ಸ್ಯಾಮ್ಸನ್ ಈ ಕುರಿತು ಪ್ರತಿಕ್ರಿಯಿಸುತ್ತಾ, “170 ರನ್‌ಗಳು ಸ್ಪರ್ಧಾತ್ಮಕ ಮೊತ್ತವಾಗಿದ್ದರೂ, ಹಗಲಿನ ಪಂದ್ಯಗಳಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವುದು ಕಠಿಣ. ಮೊಟ್ಟಮೊದಲ 10 ಓವರ್‌ಗಳಲ್ಲಿ ಬಿಸಿಲಿನ ಕಾರಣದಿಂದಲೇ ನಮ್ಮ ಆಟದ ಮೇಲೆ ಪರಿಣಾಮ ಬಿತ್ತು. ಪವರ್ ಪ್ಲೇಯಲ್ಲಿ ಎದುರಾಳಿಗಳು ಪಂದ್ಯವನ್ನೇ ತಮ್ಮದಾಗಿಸಿಕೊಂಡರು. ನಾವು ನೀಡಿದ ಕ್ಯಾಚ್‌ಗಳು ಅವರನ್ನು ಮತ್ತಷ್ಟು ಬಲಿಷ್ಠರನ್ನಾಗಿಸಿದವು. ನಾವು ಕೂಡಾ ಅವರ ಕ್ಯಾಚ್‌ಗಳನ್ನು ಕೈ ಬಿಟ್ಟಿದ್ದೇವೆ. ನಾನು ವೈಯಕ್ತಿಕವಾಗಿ ನನ್ನ ಪ್ರದರ್ಶನವನ್ನು ಇನ್ನಷ್ಟು ಸುಧಾರಿಸಬೇಕಿದೆ,” ಎಂದು ಹೇಳಿದರು.

error: Content is protected !!