
ಐಪಿಎಲ್ ಅಂಕಿಅಂಶಗಳನ್ನು ನೋಡುವಾಗ, ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಒಟ್ಟು 31 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಇದರಲ್ಲಿ ಆರ್‌ಸಿಬಿ 19 ಪಂದ್ಯಗಳನ್ನು ಜಯಿಸಿದ್ದು, ಡೆಲ್ಲಿ 11 ಗೆಲುವುಗಳೊಂದಿಗೆ ಹಿಂದಿನಲ್ಲಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೇ ಅಂತ್ಯಗೊಂಡಿದೆ. ಕೊನೆಯ ಎರಡು ಮುಖಾಮುಖಿಗಳಲ್ಲೂ ಆರ್‌ಸಿಬಿ ಮೇಲುಗೈ ಸಾಧಿಸಿದೆ.
RCB ತವರಿನಲ್ಲಿ ಮತ್ತೊಂದು ಸವಾಲು
ತವರಿನಲ್ಲಿ ಸೋಲನ್ನು ಕಂಡಿರುವ ಆರ್‌ಸಿಬಿ, ಈಗಾಗಲೇ ತವರಿನಾಚೆ ನಡೆದ ಮೂರು ಪಂದ್ಯಗಳಲ್ಲಿ ಅಮೋಘ ಗೆಲುವುಗಳನ್ನು ದಾಖಲಿಸಿದೆ. ಇದೀಗ ಗುರುವಾರ ನಡೆಯುವ ಪಂದ್ಯದಲ್ಲಿ ಅಜೇಯ ಪಯಣದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲು ತಾವಿದ್ದಾರಾಗಿದ್ದಾರೆ. ಇದು ಆರ್‌ಸಿಬಿಗೆ ತವರಿನಲ್ಲಿನ ಮತ್ತೊಂದು ಮಹತ್ವದ ಪಂದ್ಯವಾಗಲಿದೆ.
ಪಿಚ್ ರಿಪೋರ್ಟ್ – M. Chinnaswamy Stadium
ಚಿನ್ನಸ್ವಾಮಿ ಸ್ಟೇಡಿಯಂ ಎಂದರೆ ರನ್‌ಗಳ ಮಳೆ. ಈ ಮೈದಾನದಲ್ಲಿ ಪಿಚ್ ಸಂಪೂರ್ಣ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಬೌಲರ್‌ಗಳಿಗೆ ಇದು ತೀವ್ರ ಪರೀಕ್ಷೆಯ ವೇದಿಕೆ. ಕಿರು ಬೌಂಡರಿ ಮತ್ತು ವೇಗವಾದ ಔಟ್‌ಫೀಲ್ಡ್ ಹೊಂದಿರುವ ಈ ಕ್ರೀಡಾಂಗಣದಲ್ಲಿ ಯಶಸ್ಸು ಪಡೆಯಬೇಕಾದರೆ ಬೌಲರ್‌ಗಳು ಜಾಣ್ಮೆಯಿಂದ ಬೌಲಿಂಗ್ ಮಾಡಬೇಕಿದೆ.
ಹವಾಮಾನ ವರದಿ
ಪಂದ್ಯದ ದಿನ ಮಳೆಯ ಅಡ್ಡಿಯ ಸಾಧ್ಯತೆ ಇಲ್ಲದೆ ಹವಾಮಾನ ಶುಭಸೂಚಕವಾಗಿದೆ. ತಾಪಮಾನ ಗರಿಷ್ಠ 34 ಡಿಗ್ರಿ ಹಾಗೂ ಕನಿಷ್ಠ 22 ಡಿಗ್ರಿ ಇರಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆ ಬಿದ್ದರೂ ಕೂಡ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಳವಡಿಸಲಾಗಿರುವ ‘ಸಬ್ ಏರ್ ಸಿಸ್ಟಮ್’ ತಂತ್ರಜ್ಞಾನದಿಂದ 15-20 ನಿಮಿಷಗಳಲ್ಲಿ ಮೈದಾನ ಮತ್ತೆ ಆಡಲು ಸಿದ್ಧವಾಗಬಹುದು. ಹೀಗಾಗಿ, ಮಳೆಯಿಂದಾಗಿ ಪಂದ್ಯ ರದ್ದಾಗುವ ಸಾಧ್ಯತೆ ಬಹುಷಃ ಇರುವುದಿಲ್ಲ.