August 3, 2025
Breaking News label banner isolated vector design

Breaking News label banner isolated vector design

ಧರ್ಮಸ್ಥಳ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿನ ಕಾರ್ಯಾಚರಣೆಯಲ್ಲಿ ಅವಶೇಷಗಳು ಸಿಗುತ್ತವೆ ಎಂಬ ವರದಿಗಳು ಬಂದಿವೆ. ಇಂದು ಆರನೇ ಗುರುತು ಸ್ಥಳದಲ್ಲಿ ತನಿಖೆ ನಡೆಸಲಾಗಿತ್ತು. ಅಲ್ಲಿ ಹೂತುಹಾಕಲಾಗಿದ್ದ ಶವಗಳ ಅಸ್ಥಿಪಂಜರಗಳು ದೊರೆತಿವೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

ಹಲವಾರು ಮೃತದೇಹಗಳನ್ನು ಹೂತುಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಗುರುತಿಸಲಾದ 6ನೇ ಸ್ಥಳದಲ್ಲಿ ಜುಲೈ 31ರಂದು ಮಧ್ಯಾಹ್ನ 12:45ಕ್ಕೆ ಕಳೇಬರಗಳು ಸಿಕ್ಫಿವೆ ಎಂದು ಎಸ್.ಐ.ಟಿ ತನಿಖಾ ಮೂಲಗಳು ತಿಳಿಸಿವೆ.

ಇದಕ್ಕೂ ಮೊದಲಿನ ತನಿಖಾ ಸ್ಥಳಗಳಲ್ಲಿ ಕೆಲವು ಸಾಕ್ಷ್ಯಾಧಾರಗಳು ದೊರೆತಿದ್ದುವೆಂದು ವಿಶ್ವಾಸಾರ್ಹ ಮೂಲಗಳು ತಿಳಿಸಿದ್ದವು. ಇದಲ್ಲದೆ, ಈ ಬಗ್ಗೆ ಸುಜಾತಾ ಭಟ್ ಅವರ ವಕೀಲರು ಮೊದಲ ತನಿಖಾ ಸ್ಥಳದಲ್ಲಿ ಎಟಿಎಂ ಕಾರ್ಡ್, ಗುರುತು ಪತ್ರ, ರವಿಕೆ ಮೊದಲಾದ ವಸ್ತುಗಳು ಸಿಕ್ಫಿವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಈಗ ಶವದ ಅವಶೇಷಗಳು ಸಿಕ್ಫಿರುವುದರಿಂದ ಈ ಪ್ರಕರಣಕ್ಕೆ ಇನ್ನಷ್ಟು ಬಲವಾದ ಪುರಾವೆ ದೊರೆತಿದೆ.

error: Content is protected !!