
ಉಪ್ಪೂರು ಗ್ರಾಮದಲ್ಲಿ ಇತ್ತೀಚೆಗೆ ಸಂಭವಿಸಿದ ಭಾರೀ ಗಾಳಿ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಉಡುಪಿ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ ಅವರು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರ ಜೊತೆ ಭೇಟಿ ನೀಡಿ ಹಾನಿಯ ಸ್ಥಿತಿಗತಿಗಳ ಪರಿಶೀಲನೆ ನಡೆಸಿದರು.
ಉಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಗ್ಗೇಲ್ ಬೆಟ್ಟು ಪ್ರದೇಶದಲ್ಲಿ ದಿ. ಮಹಾಬಲ ಪಡಿವಾಳ ಮತ್ತು ನರ್ನಾಡು ಪ್ರದೇಶದಲ್ಲಿ ವಿಶಾಲಾಕ್ಷಿ ಭಂಡಾರಿ ಅವರ ಮನೆಗಳಿಗೆ ಗಾಳಿ ಮಳೆಯಿಂದ ಹೆಚ್ಚು ಹಾನಿಯಾಗಿದೆ. ಮನೆಮಾಲೀಕರಿಗೆ ತಮ್ಮ ವೈಯಕ್ತಿಕ ಸಹಾಯಧನದ ಮೂಲಕ ತಾತ್ಕಾಲಿಕ ಪರಿಹಾರವನ್ನು ನೀಡಿದ ಶಾಸಕರು, ಈ ಘಟನೆ ಪ್ರಾಕೃತಿಕ ವಿಕೋಪದಡಿಗೆಯಾಗಿ ಪರಿಗಣಿಸಿ ಕಂದಾಯ ಇಲಾಖೆ ಮೂಲಕ ಗರಿಷ್ಠ ಪರಿಹಾರ ವಿತರಿಸಲು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಮಹೇಶ್ ಕೋಟ್ಯಾನ್, ಕೃಷ್ಣರಾಜ ಕೋಟ್ಯಾನ್, ಶ್ರೀ ರಾಜೇಶ್ ರಾವ್, ಶ್ರೀ ಧರಣೀಶ್, ಶ್ರೀಮತಿ ಸಾವಿತ್ರಮ್ಮ ಹಾಗೂ ಸ್ಥಳೀಯ ಮುಖಂಡರಾದ ಶ್ರೀ ಸುನೀಲ್ ಶೆಟ್ಟಿ, ಶ್ರೀ ರಮೇಶ್ ಪೂಜಾರಿ, ಶ್ರೀ ಬಾಲಕೃಷ್ಣ ಶೆಟ್ಟಿ, ಶ್ರೀ ಉಮೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.