
ಖ್ಯಾತ ನಿರೂಪಕಿ ಅನುಶ್ರೀ ಮದುವೆಗೆ ಸಜ್ಜು: ಆಗಸ್ಟ್ 28ರಂದು ಬೆಂಗಳೂರುದಲ್ಲಿ ವಿವಾಹ
ಜನಪ್ರಿಯ ನಿರೂಪಕಿ ಮತ್ತು ನಟಿ ಅನುಶ್ರೀ ಅವರ ಮದುವೆ ದಿನಾಂಕ ನಿಗದಿಯಾಗಿದ್ದು, ಈ ಕುರಿತು ಅವರ ಅಭಿಮಾನಿಗಳಿಗೆ ಬಹು ನಿರೀಕ್ಷಿತ ಸಿಹಿಸುದ್ದಿ ಲಭಿಸಿದೆ. ಅನೇಕ ವರ್ಷಗಳಿಂದ “ಅನುಶ್ರೀ ಮದುವೆ ಯಾವಾಗ?” ಎಂಬ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ.
ಅವರು ಆಗಸ್ಟ್ 28 ರಂದು ಬೆಂಗಳೂರಿನಲ್ಲಿ ಪಣಿಗೊಳ್ಳಲಿದ್ದಾರೆ. ಕೊಡಗು ಮೂಲದ ಕಾರ್ಪೊರೇಟ್ ಉದ್ಯಮಿ ರೋಷನ್ ಅವರೊಂದಿಗೆ ಈ ಮದುವೆ ನಡೆಯಲಿದೆ. ಮೂಲಗಳ ಪ್ರಕಾರ, ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಆಗಿದ್ದು, ಕುಟುಂಬದವರು ಹಮ್ಮಿಕೊಂಡ ಸಮಾರಂಭವಾಗಿದೆ.
ಇದಕ್ಕೂ ಮುನ್ನ, ಅನೇಕ ನಕಲಿ ಸಾಮಾಜಿಕ ಜಾಲತಾಣ ಖಾತೆಗಳಿಂದ “ಅನುಶ್ರೀ ಈ ನಟನನ್ನು ಮದುವೆಯಾಗುತ್ತಿದ್ದಾರೆ” ಎಂಬ ವದಂತಿಗಳು ಹರಡುತ್ತಲೇ ಇದ್ದವು. ಆಗ ಪ್ರತಿಯಾಗಿ, ಅನುಶ್ರೀ ಸ್ಪಷ್ಟವಾಗಿ “ಇವೆಲ್ಲವೂ ಸುಳ್ಳು ಸುದ್ದಿಗಳು” ಎಂದು ಹೇಳುತ್ತಿದ್ದರು. ಕೆಲವೊಮ್ಮೆ ಈ ರೀತಿಯ ಸುದ್ದಿಗಳನ್ನು ಅವರು ಹಾಸ್ಯವಾಗಿ ಪರಿಗಣಿಸಿದ್ದರು.
ವಿವಾಹ ವಿಚಾರವಾಗಿ ಮಾತನಾಡಿದ ಅನುಶ್ರೀ, “ಈ ವರ್ಷವೇ ನಾನು ಮದುವೆಯಾಗ್ತೀನಿ” ಎಂಬ ಮಾತನ್ನು ‘ಸರಿಗಮಪ’, ‘ಮಹಾನಟಿ’ ಶೋಗಳಲ್ಲಿ ಹಲವು ಬಾರಿ ಪ್ರಸ್ತಾಪಿಸಿದ್ದರು. ಈಗ ಆ ಮಾತು ನಿಜವಾಗುತ್ತಿದೆ. ಈ ಬಗ್ಗೆ ಶೀಘ್ರದಲ್ಲೇ ಅವರು ಅಧಿಕೃತ ಪ್ರಕಟಣೆ ನೀಡುವ ನಿರೀಕ್ಷೆಯಿದೆ.
ಅವರು ಮಂಗಳೂರು ಮೂಲದವರಾಗಿದ್ದು, ಬಾಲ್ಯದಲ್ಲಿಯೇ ತಂದೆಯ ಅವುಪಸ್ಥಿತಿಯಲ್ಲಿ ತಾಯಿ ಎಲ್ಲ ಜವಾಬ್ದಾರಿಗಳನ್ನು ಹೊತ್ತುಕೊಂಡು, ಅನುಶ್ರೀ ಮತ್ತು ಅವರ ತಮ್ಮನನ್ನು ಬೆಳೆಸಿದ್ದರು. ಇಂದು, ಕುಟುಂಬದ ಸಂಪೂರ್ಣ ಹೊಣೆಗಾರಿಕೆಯನ್ನು ಅನುಶ್ರೀ ತಮ್ಮ ಮೇಲೇ ಹೊಂದಿದ್ದಾರೆ.
ಅನೇಕವರ್ಷಗಳ ಶ್ರಮದ ನಂತರ, ತಮ್ಮ ವೈಯಕ್ತಿಕ ಜೀವನಕ್ಕೂ ಮಹತ್ವ ನೀಡುತ್ತಿರುವ ಅನುಶ್ರೀ ಅವರ ಮದುವೆ ಸಮಾರಂಭವು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಜರುಗಲಿದೆ ಎನ್ನಲಾಗಿದೆ.