August 5, 2025
saroja-devi-696x392

ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿ ಬಿ. ಸರೋಜಾ ದೇವಿ ಅವರು ಇಂದು (ಜುಲೈ 14) ನಿಧನ ಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಬ್ಬರು ಮಕ್ಕಳನ್ನು ಹೊಂದಿರುವ ಅವರು, ದೀರ್ಘ ಕಾಲದ ನಟನೆಯ ಬದುಕಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಸರುವಾಸಿಯಾದವರಾಗಿದ್ದರು.

ಸಿನಿಮಾ ಕ್ಷೇತ್ರದಲ್ಲಿ ಸರೋಜಾ ದೇವಿಯವರು ಸುಮಾರು ಆರೂವರೆ ದಶಕಗಳ ಕಾಲ ಆಳ್ವಿಕೆ ನಡೆಸಿದರು. 2019ರಲ್ಲಿ ಬಿಡುಗಡೆಯಾದ ಪುನೀತ್ ರಾಜ್‌ಕುಮಾರ್ ಅಭಿನಯದ ‘ನಟಸಾರ್ವಭೌಮ’ ಚಿತ್ರದಲ್ಲಿ ಅವರು ಕೊನೆಯದಾಗಿ ಕಾಣಿಸಿಕೊಂಡರು.

1967ರಲ್ಲಿ ಅವರು ಹರ್ಷ ಅವರನ್ನು ವಿವಾಹವಾಗಿದ್ದರು. 1986ರಲ್ಲಿ ಪತಿಯನ್ನು ಕಳೆದುಕೊಂಡ ನಂತರ, ಇಂದೀಗ ಪತಿ ಹರ್ಷರ ಸಮಾಧಿಯ ಪಕ್ಕದಲ್ಲೇ ಅವರ ಅಂತ್ಯಕ್ರಿಯೆ ನೆರವೇರಿಸಲಾಗುತ್ತಿದೆ. ಅಂತಿಮ ವಿಧಿವಿಧಾನಗಳು ಕೊಡಿಗೆಹಳ್ಳಿಯ ತೋಟದಲ್ಲಿ, ಒಕ್ಕಲಿಗರ ಸಂಪ್ರದಾಯದಂತೆ ನಡೆಯಲಿವೆ.

ಬಿ. ಸರೋಜಾ ದೇವಿಯವರು 1938ರ ಜನವರಿ 7ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರ ತಂದೆ ಬೈರಪ್ಪ ಅವರು ಪೊಲೀಸ್ ಅಧಿಕಾರಿಯಾಗಿದ್ದರೆ, ತಾಯಿ ರುದ್ರಮ್ಮಾ ಗೃಹಿಣಿಯಾಗಿದ್ದರು. ಬಾಲ್ಯದಲ್ಲಿ ನೃತ್ಯದತ್ತ ಆಸಕ್ತಿ ಹೊಂದಿದ ಸರೋಜಾಗೆ, ತಂದೆ ಬೈರಪ್ಪ ಅವರು ಪೂರ್ಣ ಪ್ರೋತ್ಸಾಹ ನೀಡಿದರು. ಅವರೇ ಚಿತ್ರರಂಗದತ್ತ ಪಾದಾರ್ಪಣೆ ಮಾಡಲು ಅವಶ್ಯಕವಾದ ಬೆಂಬಲ ನೀಡಿದ್ದರು.

error: Content is protected !!