
ಉಡುಪಿ: ಆಟೋರಿಕ್ಷಾ ಚಾಲಕರ ನಡುವೆ ಜಗಳ, ಇಬ್ಬರಿಗೂ ಪ್ರಕರಣ ದಾಖಲು
ಉಡುಪಿಯಲ್ಲಿ ಆಟೋರಿಕ್ಷಾ ಚಾಲಕರ ಎರಡು ತಂಡಗಳ ನಡುವೆ ಜಗಳವಾಡಿ, ಓರ್ವ ಚಾಲಕ ಆಸ್ಪತ್ರೆಗೆ ದಾಖಲಾಗುವಂತಹ ಘಟನೆ ನಡೆದಿದೆ. ಜಗಳದ ಹಿನ್ನೆಲೆ ದೂರ – ಪ್ರತಿದೂರು ದಾಖಲಾಗಿದೆ.
ಘಟನೆಯ ವಿವರ:
ಪಿರ್ಯಾದಿದಾರರಾದ ಪ್ರಸಾದ್ (33), ಕುರ್ಕಾಲು, ಉಡುಪಿ ಮೂಲದವರು, ದಿನಾಂಕ 25/06/2025 ರಂದು ಸಂಜೆ 6:15ಕ್ಕೆ ಮೂಡನಿಡಂಬೂರು ಗ್ರಾಮದಲ್ಲಿರುವ ಟಿ.ಎಂ.ಎ ಪೈ ಆಸ್ಪತ್ರೆ ಬಳಿಯ ಆಟೋರಿಕ್ಷಾ ನಿಲ್ದಾಣದಲ್ಲಿ ತಮ್ಮ ಆಟೋವನ್ನು ಸರತಿ ಸಾಲಿನಲ್ಲಿ ನಿಲ್ಲಿಸಿದ್ದರು. ಈ ವೇಳೆ ರಘುನಂದನ್, ಚಂದ್ರ, ಪಣಿಶೇಖರ್, ರವಿ, ವಿಠಲ ಮತ್ತು ಇತರರು ಬಂದು, “ಇಲ್ಲಿ ಐದು ಆಟೋಗಳಿಂದ ಹೆಚ್ಚು ನಿಲ್ಲಿಸಲು ಅನುಮತಿ ಇಲ್ಲ” ಎಂದು ವಿರೋಧಿಸಿದರು.

ಪ್ರಸಾದ್ ಈ ಹೇಳಿಕೆಗೆ ಪ್ರತಿಯಾಗಿ, “ಯಾರೇ ಪರ್ಮಿಟ್ ಆಟೋಗಳು ನಿಲ್ಲಿಸಬಹುದು” ಎಂದು ಉತ್ತರಿಸಿದಾಗ, ರಘುನಂದನ್ ಆಕ್ರೋಶದಿಂದ “ನಮ್ಮ ನಿಯಮವೇ ಇಲ್ಲಿ ಚಾಲು” ಎಂದು ಹೇಳಿ ಏಕಾಏಕಿ ಪ್ರಸಾದ್ ಎದೆಗೆ ಕಾಲಿನಿಂದ ಲಾಫ್ ಮಾಡಿದ. ಪ್ರಸಾದ್ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಪಣಿಶೇಖರ್ ಸ್ಕ್ರೂಡ್ರೈವರ್‌ನಿಂದ ಚುಚ್ಚಲು ಯತ್ನಿಸಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ವೇಳೆ ರಘುನಂದನ್ ಮತ್ತಷ್ಟು ಬೆದರಿಕೆ ಹಾಕಿದಂತೆ ಪ್ರತಿದಿನಾಂಕ ದಾಖಲಾಗಿದೆ.
ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 112/2025, ಕಲಂ: 189(2), 191(2), 126(2), 115(2), 351(2), 190 BNS ಅನ್ವಯ ಪ್ರಕರಣ ದಾಖಲಾಗಿದೆ.
ಪ್ರತಿದೂರು:
ಇನ್ನೊಂದೆಡೆ, ರಘುನಂದನ್ (57), ಹೆರ್ಗಾ ಗ್ರಾಮ, ಉಡುಪಿ ಮೂಲದವರು ನೀಡಿದ ದೂರಿನಂತೆ, ಅವರು 25/06/2025 ರಂದು ಸಂಜೆ 5:30ಕ್ಕೆ ಟಿ.ಎಂ.ಎ ಪೈ ಆಸ್ಪತ್ರೆ ಬಳಿಯ ಆಟೋರಿಕ್ಷಾ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದಾಗ, ಪ್ರಸಾದ್ ಅಲ್ಲಿ ಬಂದು, “ನಿನ್ನ ಮೇಲೆ ಮೊನ್ನೆ ಕೇಸು ಹಾಕಿದ್ದೇನೆ, ಇನ್ನೂ ಬುದ್ದಿ ಬಂದಿಲ್ಲವೇ?” ಎಂದು ಹೇಳಿ, ರಾಡಿನಿಂದ ರಘುನಂದನ್ ಅವರ ಕೈಗಳಿಗೆ ಹೊಡೆದು, ಕಾಲಿನಿಂದ ತುಳಿದು, ಎದೆಗೆ ಕೈಯಿಂದ ಹೊಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಯ 10 ನಿಮಿಷಗಳ ನಂತರ, ಪ್ರಸಾದ್ ಮತ್ತು ಇತರ ಆರೋಪಿಗಳು ಬಂದು ಮತ್ತೊಮ್ಮೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 113/2025, ಕಲಂ: 115, 118(1), 351(2), 191(2), 189(2), 190 BNS ಅನ್ವಯ ಪ್ರಕರಣ ದಾಖಲಾಗಿದೆ.
ಉಡುಪಿ ನಗರ ಪೊಲೀಸರು ಇಬ್ಬರ ವಿರುದ್ಧವೂ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
