August 6, 2025
WhatsApp-Image-2025-06-27-at-09.54.25_a3fc6e45-1-696x400

ಕೊಪ್ಪಳ: ಮೂರನೇ ಹೆಂಡತಿಯನ್ನು ಕೊಂದು ಶವವನ್ನು ಬಸ್ಸಿನಲ್ಲಿ ಕಳುಹಿಸಿದ ಆರೋಪಿಯ ಬಂಧನ

ಕೊಪ್ಪಳ: ಅಪರೂಪದ ರೀತಿಯಲ್ಲಿ ನಡೆದ ಕ್ರೂರ ಘಟನೆಯನ್ನು ಕೊಪ್ಪಳ ಜಿಲ್ಲೆ ಕಂಡುಬಂದಿದೆ. ವ್ಯಕ್ತಿಯೊಬ್ಬ ತನ್ನ ಮೂರನೇ ಹೆಂಡತಿಯನ್ನು ಹತ್ಯೆ ಮಾಡಿ, ಮೃತದೇಹವನ್ನು ಲಗೇಜ್‌ ಎಂದು ಬಸ್ಸಿನಲ್ಲಿ ಕಳುಹಿಸಿ ತಲೆಮರೆಸಿಕೊಂಡಿದ್ದಾನೆ. ಮೂರು ವರ್ಷಗಳ ಕಾಲ ಪೊಲೀಸರಿಗೆ ಕೈ ತಪ್ಪಿಸಿ ತಲೆಮರೆಸಿಕೊಂಡಿದ್ದ ಆತನನ್ನು ಇದೀಗ ರಾಯಚೂರಿನಲ್ಲಿ ಬಂಧಿಸಲಾಗಿದೆ.

75 ವರ್ಷದ ಹುಸೇನಪ್ಪ ಎಂಬಾತ ಗಂಗಾವತಿ ತಾಲೂಕಿನ ಲಕ್ಷ್ಮೀ ಕ್ಯಾಂಪ್‌ನಲ್ಲಿ ಪತ್ನಿಯೊಂದಿಗೆ ವಾಸವಿದ್ದ. ಮೊದಲು ಆತ ಸರ್ಕಾರಿ ನೌಕರನಾಗಿದ್ದ. ಮೊದಲ ಪತ್ನಿ ನಿಧನರಾದ ಬಳಿಕ ಎರಡನೇ ಮದುವೆ ಮಾಡಿಕೊಂಡಿದ್ದ. ಆದರೆ ಎರಡನೇ ಪತ್ನಿ ಜಗಳದ ಹಿನ್ನೆಲೆಯಲ್ಲಿ ಪತಿಯನ್ನು ಬಿಟ್ಟು ಹೋಗಿದ್ದಳು. ನಂತರ, ಹುಸೇನಪ್ಪನು “ನಾನು ಸರ್ಕಾರಿ ನೌಕರ” ಎಂದು ಹೇಳಿ ಕೊಪ್ಪಳ ತಾಲೂಕಿನ ಇಂದರಗಿ ನಿವಾಸಿ ರೇಣುಕಮ್ಮ ಅವರನ್ನು ಮೂರನೇ ಮದುವೆ ಮಾಡಿಕೊಂಡಿದ್ದ.

ಬಸ್ಸಿನಲ್ಲಿ ಶವ ಕಳುಹಿಸಿ ಪರಾರಿಯಾದ ಹಂತಕ

2002ರಲ್ಲಿ ಗಂಗಾವತಿಯಲ್ಲಿ ನಡೆದ ಈ ಕ್ರೂರ ಕೃತ್ಯದಲ್ಲಿ ಹುಸೇನಪ್ಪನು ಪತ್ನಿ ರೇಣುಕಮ್ಮ ಅವರನ್ನು ಚೂರಿಯಿಂದ ಕೊಚ್ಚಿ ಹತ್ಯೆ ಮಾಡಿದ್ದ. ಬಳಿಕ ಶವವನ್ನು ಲಗೇಜ್ ಎಂದು ಬಸ್‌ನಲ್ಲಿ ಕಳುಹಿಸಿ ಪರಾರಿಯಾಗಿದ್ದ. ಪ್ರಕರಣ ದಾಖಲಾದರೂ, ಆತನ ಪತ್ತೆಸಾಧ್ಯವಾಗಿಲ್ಲ.

ಆರು ತಿಂಗಳ ಹಿಂದೆ ಹುಸೇನಪ್ಪ ತನ್ನ ಸ್ವಗ್ರಾಮ ಹಾಲದಾಳಕ್ಕೆ ಆಗಮಿಸಿದ್ದ ಮಾಹಿತಿ ಪೊಲೀಸರಿಗೆ ದೊರೆಯಿತು. ಗಂಗಾವತಿ ಪೊಲೀಸರು ತಕ್ಷಣ ಜಾಡು ಹಿಡಿದು ಕಾರ್ಯಾಚರಣೆ ನಡೆಸಿ, ರಾಯಚೂರ ಜಿಲ್ಲೆಯ ಮಾನ್ವಿಯಲ್ಲಿ ಹುಸೇನಪ್ಪನನ್ನು ಬಂಧಿಸಿದರು.

ಈ ಬಂಧನದೊಂದಿಗೆ ಮೂರು ವರ್ಷಗಳಿಂದ ಬಗೆಹರಿಯದ ಉಳಿದಿದ್ದ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಬಯಲಿಗೆಳೆದಿದ್ದಾರೆ.

error: Content is protected !!