
ಅಸುರಕ್ಷಿತ ಕಾಂತಿವರ್ಧಕ ಔಷಧ ಹಾಗೂ ಔಷಧಿಗಳ ಪಟ್ಟಿ ಬಿಡುಗಡೆ: ಆರೋಗ್ಯ ಇಲಾಖೆಯ ಎಚ್ಚರಿಕೆ
ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತವು ಅಸುರಕ್ಷಿತ ಎಂದು ಪತ್ತೆಹಚ್ಚಿದ ಕಾಂತಿವರ್ಧಕ ಔಷಧ ಮತ್ತು ಔಷಧಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೇ ತಿಂಗಳಲ್ಲಿ ಆರೋಗ್ಯ ಇಲಾಖೆ ವಿವಿಧ ಔಷಧಗಳ ಸ್ಯಾಂಪಲ್ಸ್‌ಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಿದ್ದು, ಈ ತಪಾಸಣೆಯಲ್ಲಿ 15 ಕಾಂತಿವರ್ಧಕ ಔಷಧಗಳು ಹಾಗೂ ಔಷಧಿಗಳು ಅಸುರಕ್ಷಿತ ಎಂದು ಪತ್ತೆಹಚ್ಚಲಾಗಿದೆ.
ಈ ಪಟ್ಟಿಯಲ್ಲಿ ಮೈಸೂರು ಮೂಲದ ‘ಓ ಶಾಂತಿ ಗೋಲ್ಡ್ ಕುಂಕುಮ್’ ಸೇರಿದಂತೆ ರಾಜ್ಯ ಮತ್ತು ಹೊರರಾಜ್ಯದ ಕಂಪನಿಗಳ ಉತ್ಪನ್ನಗಳು ಸೇರಿವೆ. ಆರೋಗ್ಯ ಇಲಾಖೆ ಈ ಔಷಧಿಗಳನ್ನು ಹಾಗೂ ಕಾಂತಿವರ್ಧಕಗಳನ್ನು ಮಾರಾಟ, ಬಳಕೆ, ದಾಸ್ತಾನು ಹಾಗೂ ವಿತರಣೆ ಮಾಡುವುದು ನಿಷಿದ್ಧವೆಂದು ಸುತ್ತೋಲೆ ಹೊರಡಿಸಿದೆ.
ಅಸುರಕ್ಷಿತ ಎಂಬುದಾಗಿ ಪತ್ತೆಯಾಗಿರುವ ಔಷಧಿ ಹಾಗೂ ಕಾಂತಿವರ್ಧಕಗಳ ಪಟ್ಟಿ:
- ಕಂಪೌಂಡ್ ಸೋಡಿಯಂ ಲ್ಯಾಕ್ಟೆಟ್ ಇಂಜೆಕ್ಷನ್ IP – Ultra Laboratories Pvt. Ltd.
- ಕಂಪೌಂಡ್ ಸೋಡಿಯಂ ಲ್ಯಾಕ್ಟೆಟ್ ಇಂಜೆಕ್ಷನ್ IP – Tom Braun Pharmaceuticals Pvt. Ltd.
- ಪೋಮೋಲ್-650 (ಪ್ಯಾರಾಸಿಟಮೋಲ್ ಟ್ಯಾಬ್ಲೆಟ್) – Aban Pharmaceuticals Pvt. Ltd.
- ಮಿಟು ಕ್ಯೂ7 ಸಿರಪ್ – Bion Therapeutics India Pvt. Ltd.
- ಸ್ಟೈರಲ್ ಡಿಲ್ಯೈಯಂಟ್ ಪಾರ್ ರೆಕಾನೋಸ್ಟಿಟಿಶ್ಯೂನ್ ಆಫ್ ಎನ್‌ಡಿ, ಐಬಿ, ಐಬಿಡಿ ಮತ್ತು ಪೌಲ್ಟ್ರಿ ವ್ಯಾಕ್ಸಿನ್ – Safe Parenterals Pvt. Ltd.
- ಸ್ಪಾನ್‌ಪ್ಲಾಕ್ಸ್-ಒಡ್ ಟ್ಯಾಬ್ಲೆಟ್ಸ್ (ಓಫ್ಲಾಕ್ಸಸಿನ್ & ಓರ್ನಿಡಜೋಲ್) – Indorama Health Care Pvt. Ltd.
- ಪ್ಯಾಂಟೋಕೋಟ್-ಡಿಎಸ್‌ಆರ್ (ಪ್ಯಾಂಟೋಪ್ರಜೋಲ್ & ಡೋಮ್‌ಪೆರಿಡೋನ್ ಕ್ಯಾಪ್ಸುಲ್) – Svefn Pharmaceuticals Pvt. Ltd.
- ಸೋಡಿಯಂ ಕ್ಲೋರೈಡ್ ಇಂಜೆಕ್ಷನ್ IP 0.9% – Puniska Injectables Pvt. Ltd.
- ಅಲ್ಪಾ ಲಿಪೋಯಿಕ್ ಆಸಿಡ್, ಪೋಲಿಕ್ ಆಸಿಡ್, ಮೆಥೈಲ್ ಕೋಬಾಲಮಿನ್, ವಿಟಮಿನ್ B6, ವಿಟಮಿನ್ D3 ಟ್ಯಾಬ್ಲೆಟ್ಸ್ – East African (India) Overseas
- ಓ ಶಾಂತಿ ಗೋಲ್ಡ್ ಕ್ಲಾಸ್ ಕುಂಕುಮ್ – N. Ranga Rao & Sons Pvt. Ltd.
- ಪಿರಾಸಿಡ್-ಓ ಸಸ್ಪೆನ್ಷನ್ (ಸುಕ್ರಾಲ್ಫೇಟ್ & ಆಕ್ಸೆಟಾಕೈನ್ ಸಸ್ಪೆನ್ಷನ್) – Rednex Pharmaceuticals Pvt. Ltd.
- ಗ್ಲಿಮಿಜ್-2 (ಗ್ಲಿಮಿಪಿರೈಡ್ ಟ್ಯಾಬ್ಲೆಟ್) – KNM Pharma Pvt. Ltd.
- ಐರನ್ ಸುಕ್ರೋಸ್ ಇಂಜೆಕ್ಷನ್ USP 100 mg (IROGAIN) – Regain Laboratories
- ಕಂಪೌಂಡ್ ಸೋಡಿಯಂ ಲ್ಯಾಕ್ಟೆಟ್ ಇಂಜೆಕ್ಷನ್ IP (RL ಸೊಲ್ಯೂಷನ್) – Otsuka Pharmaceuticals India
ಆರೋಗ್ಯ ಇಲಾಖೆ ಸೂಚನೆ:
ಈ ಪಟ್ಟಿ ಯಲ್ಲಿರುವ ಯಾವುದೇ ಔಷಧಿ ಅಥವಾ ಕಾಂತಿವರ್ಧಕಗಳ ಖರೀದಿ, ಮಾರಾಟ, ಸಾಗಣೆ, ದಾಸ್ತಾನು ಹಾಗೂ ಬಳಕೆ ಮಾಡಲು ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗಿದೆ. ವೈದ್ಯರು, ಔಷಧ ವ್ಯಾಪಾರಿಗಳು, ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್‌ಗಳು ಇದನ್ನು ಕಡ್ಡಾಯವಾಗಿ ಪಾಲಿಸಬೇಕು.