August 5, 2025
n66965807817507335642314722309b33a029af780a95164745d64865405598e8da22d67a670be916017e10

ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಕಿಡಿಕಾರಿಕೆ: ಸಿರಿಯಾದಲ್ಲಿರುವ ಅಮೆರಿಕ ಮಿಲಿಟರಿ ನೆಲೆಯ ಮೇಲೆ ಹಾಳಿ!

ಇರಾನ್‌ನ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ದಾಳಿ ನಡೆಸಿದ ಬಳಿಕ, ಇರಾನ್ ಅಧ್ಯಕ್ಷ ಅಯತೊಲ್ಲಾ ಅಲಿ ಖಮೇನಿ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅಮೆರಿಕದ ವಿರುದ್ಧ ತಕ್ಷಣವೇ ತಿರುಗೇಟು ನೀಡಲು ಇರಾನ್ ತಂತ್ರ ರೂಪಿಸಿದ್ದು, ಸಿರಿಯಾದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಯ ಮೇಲೆ ದಾಳಿ ನಡೆಸಿದಂತೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಈ ದಾಳಿಯಲ್ಲಿ ಪ್ರಸ್ತುತ ಯಾವುದೇ ಸಾವುನೋವುಗಳು ಸಂಭವಿಸಿಲ್ಲ ಹಾಗೂ ಯಾವುದೇ ಹಾನಿಯ ವಿವರಗಳು ಪ್ರಕಟವಾಗಿಲ್ಲ.

‘ಆಪರೇಷನ್ ಮಿಡ್‍ನೈಟ್ ಹ್ಯಾಮರ್’ ಹೆಸರಿನಲ್ಲಿ ಅಮೆರಿಕ, ಇರಾನ್‌ನ ಪ್ರಮುಖ ಮೂರು ಪರಮಾಣು ನೆಲೆಗಳು – ಫೋರ್ಡೊ, ನಟಾಂಜ್ ಮತ್ತು ಇಸ್ಫಹಾನ್ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಿರುಗೇಟು ನೀಡುವ ಪ್ರತಿಜ್ಞೆ ಮಾಡಿದೆ.

ಇದರ ಬೆನ್ನಲ್ಲೇ, ವಿಶ್ವಸಂಸ್ಥೆಯಲ್ಲಿ ಇರಾನ್ ರಾಯಭಾರಿ ಅಮೀರ್ ಸಯೀದ್ ಇರಾಮಿನಿ, “ಇದು ನಮ್ಮ ರಕ್ಷಣೆಯ ಭಾಗ. ಅಮೆರಿಕದ ಮೇಲೆ ದಾಳಿ ಮಾಡುವ ಸಮಯ ಮತ್ತು ಸ್ಥಳವನ್ನು ನಾವು ನಿಶ್ಚಯಿಸುತ್ತೇವೆ” ಎಂದು ಹಿಂದೆ ಹೇಳಿದ ಮಾತು ಈಗ ಸತ್ಯವಾಗಿದೆ. ಅವರ ಹೇಳಿಕೆಯಂತೆ ಇರಾನ್ ಈಗ ಅಮೆರಿಕದ ವಾಯುನೆಲೆ ಮೇಲೆ ಹೊಡೆದಿದ್ದು, ಉಗ್ರತೆಯ ಲೆಕ್ಕಾಚಾರ ಇನ್ನೂ ಮುಂದುವರಿಯುವ ಸೂಚನೆ ನೀಡಿದೆ.

error: Content is protected !!