August 7, 2025
Screenshot_20250616_2101022-640x364

ಬಂಡೆಗಳ ನಡುವೆ ಸಿಲುಕಿ ಅಪಾಯದಿಂದ ಪಾರಾದ ಯುವಕರು – ಹೊಳೆ ದಾಟುವ ದುರಾಸೆ ಜೀವಕ್ಕೆ ತೊಂದರೆ

ಬೆಳ್ತಂಗಡಿ: ಸವಣಾಲು ಗ್ರಾಮದ ಹಿತ್ತಿಲಪೇಲದಲ್ಲಿ ಇಬ್ಬರು ಯುವಕರು ಬೈಕ್‌ನಲ್ಲಿ ಹೊಳೆ ದಾಟಲು ಯತ್ನಿಸುತ್ತಿದ್ದಾಗ ನೀರಿನ ಒತ್ತಡಕ್ಕೆ ಕೊಚ್ಚಿ ಹೋಗಿ, ಬಳಿಕ ಬಂಡೆಗಳ ಮಧ್ಯೆ ಸಿಲುಕಿ ಅಪಾಯದಿಂದ ಪಾರಾಗಿದ ಘಟನೆ ಜೂನ್ 16ರಂದು ನಡೆದಿದೆ.

ಮಂಜದಬೆಟ್ಟುವಿನಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಿತ್ತಿಲಪೇಲ ಕಡೆಗೆ ಹೋಗುತ್ತಿದ್ದ ಸತೀಶ್ ಹಾಗೂ ಸಂಜೀವ ಪೂಜಾರಿ ಎಂಬ ಯುವಕರು ಕೂಡುಜಾಲು ಎಂಬಲ್ಲಿ ಹರಿಯುವ ಹೊಳೆ ದಾಟಲು ಯತ್ನಿಸಿದರು. ಈ ವೇಳೆ, ಅವರ ಬೈಕ್ ನೀರಿನ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು, ಇಬ್ಬರೂ ಯುವಕರು ಸಹ ನೀರಿನಲ್ಲಿ ಕೊನೆವರೆಗೆ ಕೊಚ್ಚಿ ಹೋಗಿದ್ದಾರೆ. ಆದರೆ, ಬೈಕ್ ಬಂಡೆಗಳ ನಡುವೆ ಸಿಲುಕಿದ ಕಾರಣದಿಂದಾಗಿ ಜೀವಿತವಂತರಾಗಿ ಪಾರಾಗಿದ್ದಾರೆ.

ಘಟನೆ ನಡೆದ ಸ್ಥಳ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿದ್ದು, ಈ ಪ್ರದೇಶದಲ್ಲಿ ಮಳೆಗಾಲದಲ್ಲಿ ಹೊಳೆ ತುಂಬಿ ಹರಿಯುವುದು ಸಾಮಾನ್ಯ. ಇದರಿಂದಾಗಿ ಸ್ಥಳೀಯರು ಎಷ್ಟೊಮ್ಮೆ ಸೇತುವೆ ನಿರ್ಮಾಣದ ಅಗತ್ಯವಿದೆ ಎಂದು ಆಗ್ರಹಿಸುತ್ತಾ ಬಂದಿದ್ದಾರೆ. ಆದರೆ ಅರಣ್ಯ ಇಲಾಖೆಯ ನಿಯಮಾವಳಿಯಿಂದಾಗಿ ಈವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ.

ಈ ಪ್ರದೇಶದಲ್ಲಿ ಸುಮಾರು 9 ಕುಟುಂಬಗಳು ವಾಸವಾಗಿದ್ದು, ಪ್ರತಿದಿನವೂ ಮಕ್ಕಳು, ಮಹಿಳೆಯರು, ಯುವಕರು ಈ ಹೊಳೆಯನ್ನು ದಾಟಬೇಕಾಗುತ್ತದೆ. ಇತ್ತೀಚೆಗೆ ಮಳೆ ಹೆಚ್ಚಾಗಿರುವುದರಿಂದ ನೀರಿನ ಹರಿವು ತೀವ್ರವಾಗಿದ್ದರೂ, ಯುವಕರು ದುಸ್ಸಾಹಸಕ್ಕೆ ಮುಂದಾಗಿ ಅಪಾಯಕ್ಕೆ ತುತ್ತಾದರೂ ಅದೃಷ್ಟವಶಾತ್ ಬದುಕುಳಿದಿದ್ದಾರೆ.

error: Content is protected !!