April 29, 2025
WhatsApp-Image-2025-04-28-at-15.32.08_3e174939-696x385

ಬೆಂಗಳೂರು: ಸಿಲಿಕಾನ್ ಸಿಟಿ ಕೆ.ಆರ್.ಪುರಂನಲ್ಲಿ ನಡೆದ ಮಂಗಳಮುಖಿ ತನುಶ್ರೀ ಹತ್ಯೆ ಪ್ರಕರಣದಲ್ಲಿ ಪೊಲೀಸರ ತನಿಖೆಯಲ್ಲಿ ಮಹತ್ವದ ಮಾಹಿತಿ ಬಹಿರಂಗವಾಗಿದೆ.
ಮೃತ ತನುಶ್ರೀ, ಜಗದೀಶ್ ತನ್ನ ಜೊತೆಯಲ್ಲಿ ಇರಲೆಂದು ನಿರಂತರ ಒತ್ತಾಯಿಸುತ್ತಿದ್ದಳು. ಜೊತೆಗೆ ಬಲವಂತವಾಗಿ ಮದುವೆಯಾಗಬೇಕೆಂದು ಒತ್ತಡ ಹೇರುತ್ತಿದ್ದ ಕಾರಣ, ಜಗದೀಶ್ ಈ ಕ್ರೂರಕೃತ್ಯ ಎಸಗಿದ್ದಾನೆ. ಕೊಲೆಯ ನಂತರ, ಮುಖ್ಯ ಆರೋಪಿ ಜಗದೀಶ್ ತಿರುಪತಿಗೆ ಪರಾರಿಯಾಗಿದ್ದ. ತನಿಖೆಯನ್ನು ವೇಗಗೊಳಿಸಿದ ಪೊಲೀಸರು, ಪ್ರಮುಖ ಆರೋಪಿ ಸೇರಿದಂತೆ ಕೊಲೆಗೆ ಸಹಾಯ ಮಾಡಿದ ಇಬ್ಬರನ್ನೂ ಬಂಧಿಸಿದ್ದಾರೆ. ಬಂಧಿತ ಆರೋಪಿಗಳೆಂದರೆ ಜಗದೀಶ್, ಪ್ರಭಾಕರ್ ಮತ್ತು ಸುಶಾಂತ್.

ಏಪ್ರಿಲ್ 20 ರಂದು ತನುಶ್ರೀಯ ಮೃತದೇಹವನ್ನು ಆಕೆಯ ನಿವಾಸದಲ್ಲಿ ಪತ್ತೆಹಚ್ಚಲಾಯಿತು. ಕೊಲೆಯಾದ ಮೂರು ದಿನಗಳ ನಂತರ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರ ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು ಮತ್ತು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

ಸೋಷಿಯಲ್ ಸರ್ವೀಸ್ ಕಾರ್ಯದಲ್ಲಿ ತೊಡಗಿದ್ದ ಜಗದೀಶ್‌ಗಿತನುಶ್ರೀಯ ಪರಿಚಯ ಹುಟ್ಟಿತ್ತು. ಈ ಹಿನ್ನೆಲೆಯಿಂದ ಇಬ್ಬರ ನಡುವೆ ಸ್ನೇಹ ಬೆಳೆಸಿಕೊಂಡಿತ್ತು. ಕೆಲವೆಸಾರಿ ಸಮಾಜ ಸೇವಾ ಚಟುವಟಿಕೆಗಳಿಗಾಗಿ ಇಬ್ಬರೂ ಒಟ್ಟಿಗೆ ಪ್ರಯಾಣಿಸಿದ್ದರು. ಅಲ್ಲದೆ ಜಗದೀಶ್ ತನುಶ್ರೀಯ ಮನೆಗೂ ಆಗಾಗ ಭೇಟಿಕೊಡುತ್ತಿದ್ದ. ಆದರೀಗ, ತನುಶ್ರೀಯ ಮದುವೆಗಾಗಿ ಹಾಕುತ್ತಿದ್ದ ಒತ್ತಡದಿಂದ ಬೇಸತ್ತು ಹೋಗಿದ್ದ ಜಗದೀಶ್ ಕೊಲೆ ಮಾಡುವ ತೀರ್ಮಾನ ಕೈಗೊಂಡನು. ಇದಕ್ಕೆ ಧೈರ್ಯ ಸಿಗಲೆಂದು ತನ್ನ ಇಬ್ಬರು ಸ್ನೇಹಿತರನ್ನು ಕೂಡ ಕರೆಸಿಕೊಂಡನು.
ತೀರ್ಮಾನ ಮಾಡಿದಂತೆ, ಏಪ್ರಿಲ್ 17ರ ರಾತ್ರಿ ಮನೆಗೆ ಬಂದು, ತನುಶ್ರೀಯ ಮೇಲೆ ಚಾಕು ಪ್ರಹಾರ ಮಾಡಿ ಹತ್ಯೆ ನಡೆಸಲಾಯಿತು. ಬಳಿಕ, ಪ್ಲಾನ್ ಪ್ರಕಾರ ಜಗದೀಶ್ ಸ್ಥಳದಿಂದ ಪರಾರಿಯಾದನು. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿ, ತನಿಖೆಯನ್ನು ಮುಂದುವರಿಸಿದ್ದಾರೆ.

error: Content is protected !!