August 3, 2025
WhatsApp-Image-2025-04-12-at-07.59.18_a941baa0-696x398

ಉತ್ತರ ಪ್ರದೇಶ: 30 ವರ್ಷದ ಮಹಿಳೆ 12ನೇ ತರಗತಿಯ ವಿದ್ಯಾರ್ಥಿಯನ್ನು ಮದುವೆಯಾದ ಪ್ರಕರಣ ವಿವಾದಕ್ಕೆ ಕಾರಣ

ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯ 30 ವರ್ಷದ ಮಹಿಳೆ ಶಬಾನಾ ಈಗ ಮೂರನೇ ಬಾರಿ ಮದುವೆಯಾಗಿ ಸುದ್ದಿಗೆ ಏರಿದ್ದಾರೆ. ಇವರು ಈಗಾಗಲೇ ಎರಡು ಬಾರಿ ಮದುವೆಯಾಗಿದ್ದು, ಇಬ್ಬರಿಗೂ ವಿಚ್ಛೇದನ ಪಡೆದಿದ್ದಾರೆ. ಇದೀಗ ಇವರು 12ನೇ ತರಗತಿಯ 18 ವರ್ಷದ ಶಾಲಾ ವಿದ್ಯಾರ್ಥಿಯನ್ನು ಮದುವೆಯಾಗಿದ್ದಾರೆ.

ಈ ಮದುವೆಯ ಹಿನ್ನೆಲೆಯಲ್ಲಿ ಶಬಾನಾ ಇಸ್ಲಾಂ ಧರ್ಮ ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿ ತನ್ನ ಹೆಸರನ್ನೂ “ಶಿವಾನಿ” ಎಂದು ಬದಲಾಯಿಸಿಕೊಂಡಿದ್ದಾರೆ.

ಪೊಲೀಸರ ಪ್ರಕಾರ, ಶಿವಾನಿ ಈಗ ನಿರ್ಗತಿಕಳಾಗಿ ಜೀವನ ಸಾಗಿಸುತ್ತಿದ್ದು, ಈಕೆಗೆ ಹಿಂದಿನ ಮದುವೆಯಿಂದ ಮೂರು ಮಕ್ಕಳಿದ್ದಾರೆ. ಮೊದಲ ಮದುವೆ ಮೀರತ್‌ನ ವ್ಯಕ್ತಿಯೊಂದಿಗೆ ಆಗಿದ್ದು, ಕೆಲವು ವರ್ಷಗಳಲ್ಲಿ ವಿಚ್ಛೇದನ ಪಡೆದಿದ್ದರು. ನಂತರ ಎರಡನೇ ಮದುವೆಯಲ್ಲಿ ಪತಿ ಅಪಘಾತದ ಪರಿಣಾಮ ಅಂಗವಿಕಲರಾದರು. ಈ ಸಂದರ್ಭ, 2011 ರಲ್ಲಿ ಶಾಲಾ ವಿದ್ಯಾರ್ಥಿಯೊಬ್ಬನ ಪರಿಚಯವಾಗಿದ್ದು, ಬಳಿಕ ಅವರು ಪ್ರೀತಿಸುತ್ತಾ ಮದುವೆಯಾದರು.

ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ನಂತರ, ಜನರಲ್ಲಿ ಕೋಪ ಹಾಗೂ ಆಕ್ರೋಶ ಹೆಚ್ಚಾಗಿದೆ. ಅನೇಕರು ಇದು ಕಾನೂನುಬದ್ಧವಾಗಿಲ್ಲದ ಸಂಬಂಧವೆಂದು ಹೇಳಿ ಮಹಿಳೆಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

error: Content is protected !!