March 18, 2025
prajavani_2025-03-17_gdf3k685_file7zszt8wa46wnca04jap

ಉಡುಪಿ: ನಗರಸಭೆಯ ಕಲ್ಮಾಡಿ ವಾರ್ಡ್‌ನ ಗರೋಡಿ ಬಳಿಯ ದೇವರಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಯಶ್‌ಪಾಲ್ ಸುವರ್ಣ ಸೋಮವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉಡುಪಿ ನಗರಸಭೆ ವತಿಯಿಂದ ಸುಮಾರು ₹35 ಲಕ್ಷ ವೆಚ್ಚದಲ್ಲಿ ದೇವರ ಕೆರೆ ಅಭಿವೃದ್ಧಿ ನಡೆಯಲಿದ್ದು, ಅಂತರ್ಜಲ ಮಟ್ಟವನ್ನು ಸುಧಾರಿಸಲು ಕೆರೆಗಳ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ವಹಿಸುವುದಾಗಿ ತಿಳಿಸಿದರು.

ನಗರಸಭೆ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ, ಸ್ಥಳೀಯ ಮುಖಂಡರಾದ ಲಕ್ಷ್ಮೀಶ್ ಬಂಗೇರ, ವಿನಯ್ ಕಲ್ಮಾಡಿ, ವಿವೇಕ್, ದಾಮೋದರ ಕಲ್ಮಾಡಿ, ರಾಘವ ಪೂಜಾರಿ, ರಮೇಶ್ ಮಾಸ್ಟರ್, ಇಂದಿರಾ ಶೇಖರ್, ಚಂದ್ರಕಾಂತ್ ಕಲ್ಮಾಡಿ, ಜಯರಾಮ ಭಟ್ ಉಪಸ್ಥಿತರಿದ್ದರು.