March 14, 2025
2025-01-20 at 3.53.01 M
ಕರ್ನಾಟಕ: ಮದ್ಯಪ್ರಿಯರಿಗೆ ಬಿಗ್ ಶಾಕ್; ಬಜೆಟ್​ಗೂ ಮೊದಲೇ ಮತ್ತೊಮ್ಮೆ ಬಿಯರ್ ದರ ಭಾರಿ ಹೆಚ್ಚಳ…!!

ಕರ್ನಾಟಕದಲ್ಲಿ ಬಿಯರ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಹಾಗಂತ ಎಲ್ಲಾ ಬ್ರ್ಯಾಂಡ್‌ನ ಬಿಯರ್‌ಗಳ ಬೆಲೆಯಲ್ಲಿ ಏರಿಕೆಯಾಗಿಲ್ಲ. ಜನಸಾಮಾನ್ಯರ ಪಾಲಿಗೆ ಕೈಗೆಟುವ 300 ರೂ. ಒಳಗಡೆ ಇರುವ ಕೆಲವು ಬಿಯರ್‌ ಬ್ರ್ಯಾಂಡ್‌ಗಳ ಬೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ದರ ಏರಿಕೆ ಮಾಡಿದೆ.

ಜನಪ್ರಿಯ ಬ್ರ್ಯಾಂಡ್‌ಗಳಾದ ಲಜೆಂಡ್, ಪವರ್‌ಕೂಲ್, ಬ್ಲ್ಯಾಕ್ ಫೋರ್ಟ್ ಸೇರಿದಂತೆ ಹಲವು ಬಿಯರ್‌ಗಳ ಬೆಲೆ 10 ರಿಂದ 45 ರೂ.ವರೆಗೆ ಏರಿಕೆಯಾಗಿದ್ದು, ಇಂದಿನಿಂದಲೇ ಪರಿಷ್ಕೃತ ದರ ಜಾರಿಯಾಗಿದೆ. ಈ ಮೂಲಕ ಒಂದೇ ವರ್ಷದಲ್ಲಿ ಮೂರನೇ ಬಾರಿಗೆ ಬಿಯರ್‌ಗಳ ದರ ಏರಿಕೆ ಮಾಡಿದಂತಾಗಿದೆ. ಲಜೆಂಡ್‌ ಬಿಯರ್‌ ಮೊದಲು 100 ರೂಪಾಯಿಗೆ ಸಿಗುತ್ತಿತ್ತು. ಇದರಲ್ಲಿ 45 ರೂಪಾಯಿ ಏರಿಕೆಯಾಗಿದೆ. ಇನ್ನು ಪವರ್‌ಕೂಲ್‌ ಹೆಸರಿನ ಬಿಯರ್‌ಗೆ ಈ ಹಿಂದೆ 130 ರೂಪಾಯಿ ಬೆಲೆ ಇತ್ತು. ಇಂದಿನಿಂದ 155 ರೂಪಾಯಿಗೆ ಹೆಚ್ಚಳವಾಗಿದೆ.ಬ್ಲ್ಯಾಕ್‌ ಫೋರ್ಟ್‌ ಹೆಸರಿನ ಬಿಯರ್‌ಗೆ 15 ರೂಪಾಯಿ ದರ ಏರಿಕೆ ಮಾಡಲಾಗಿದೆ. ಇದರೊಂದಿಗೆ ಬ್ಲ್ಯಾಕ್‌ ಫೋರ್ಟ್‌ ಬಿಯರ್ ಇಂದಿನಿಂದ ಬಾಟಲ್‌ಗೆ 160 ರೂಪಾಯಿ ಆಗಿದೆ. ಹಂಟರ್‌ ಬಿಯರ್‌ನ ಬೆಲೆಯಲ್ಲಿ 10 ರೂಪಾಯಿ ಏರಿಕೆಯಾಗಿದ್ದು, 190 ರೂಪಾಯಿ ಆಗಿದೆ. ಅದರೊಂದಿಗೆ ವುಡ್‌ಪೀಕರ್‌ ಕ್ರೆಸ್ಟ್‌ ಹಾಗೂ ವುಡ್‌ಪೀಕರ್‌ ಗ್ಲೈಡ್‌ ಬಿಯರ್‌ ಬೆಲೆಯಲ್ಲಿ ತಲಾ 10 ರೂಪಾಯಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ಬಿಯರ್‌ಗಳು ಕ್ರಮವಾಗಿ 250 ಹಾಗೂ 240 ರೂಪಾಯಿಗೆ ಇಂದಿನಿಂದ ಮಾರಾಟವಾಗುತ್ತಿದೆ.

ಈ ಸರ್ಕಾರ ಬಂದಮೇಲೆ 5ನೇ ಬಾರಿ ಬಿಯರ್ ದರ ಏರಿಕೆ ಮಾಡಿದೆ ಎಂದು ಅಸಮಾದಾನ ಹೊರಹಾಕಿದರು. ಬಿಯರ್​ ದರ ಏರಿಕೆಗೆ ಬಾರ್ ಮಾಲೀಕರು, ಮದ್ಯಪ್ರಿಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *