
ದಾವಣಗೆರೆ: ಅತ್ತೆಯ ಜೊತೆ 25 ವರ್ಷದ ಅಳಿಯ ಓಡಿಹೋಗಿದ ಘಟನೆ!
ದಾವಣಗೆರೆ ನಗರದಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. 25 ವರ್ಷದ ಅಳಿಯ ಗಣೇಶ್ ತನ್ನ 55 ವರ್ಷದ ಅತ್ತೆ ಶಾಂತಾಳ ಜೊತೆ ಪರಾರಿಯಾಗಿರುವ ಘಟನೆ ನಡೆದಿದೆ. ಚನ್ನಗಿರಿ ಬಸ್ ನಿಲ್ದಾಣದಲ್ಲಿ ತನ್ನ ಪತ್ನಿ ಹೇಮಾಳನ್ನು ಬಿಟ್ಟು, ಅತ್ತೆಯೊಂದಿಗೆ ಗಣೇಶ್ ಪರಾರಿಯಾಗಿದ್ದಾನೆ.
ಮದುವೆಯಾದ ಹದಿನೈದು ದಿನಗಳಲ್ಲೇ ಗಣೇಶ್ ತನ್ನ ಪತ್ನಿ ಹೇಮಾಳ ತಾಯಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದನ್ನು ಪತ್ನಿ ಹಿಮಾ ಪತ್ತೆ ಹಚ್ಚಿದ್ದಾಳೆ. ಗಣೇಶ್‌ನ ಮೊಬೈಲ್‌ನಲ್ಲಿ ಅತ್ತೆ ಶಾಂತಾಳೊಂದಿಗೆ ಅಶ್ಲೀಲ ಸಂದೇಶಗಳನ್ನು ನೋಡಿದ ಪತ್ನಿ, ಇದನ್ನು ತಕ್ಷಣ ತನ್ನ ತಂದೆ ನಾಗರಾಜ್‌ಗೆ ತಿಳಿಸಿದ್ದಾಳೆ.
ಶಾಂತಾ, ಮುದ್ದೇನಹಳ್ಳಿ ಗ್ರಾಮದ ನಾಗರಾಜ್ ಅವರ ಎರಡನೇ ಪತ್ನಿ. ನಾಗರಾಜ್ ಅವರಿಗೆ ಮೊದಲ ಪತ್ನಿಯಿಂದ ಮೂವರು ಮಕ್ಕಳು ಇದ್ದಾರೆ. ಇದರಲ್ಲಿ ಹೇಮಾಳನ್ನು ಇತ್ತೀಚೆಗೆ ಗಣೇಶ್‌ಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಮದುವೆಗೆ ಮುನ್ನೇ, ಶಾಂತಾಳಿಗೆ ಗಣೇಶ್ ಜೊತೆ ನಿಕಟ ಸಂಪರ್ಕವಿತ್ತು ಎಂಬುದು ಈಗ ಬಹಿರಂಗವಾಗಿದೆ.
ಸಂಪೂರ್ಣ ಪ್ರಕರಣ ಗೊತ್ತಾದ ನಂತರ ಶಾಂತಾ ಹಣ, ಆಭರಣ ಕದ್ದುಕೊಂಡು ಗಣೇಶ್ ಜೊತೆ ಪರಾರಿಯಾಗಿದ್ದಾಳೆ. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.