August 6, 2025
IMG-20250803-WA0021

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಅಪರಿಚಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಂದು ಹೊಸ ತಿರುವು ಸಿಕ್ಕಿದೆ. ಇದಕ್ಕೆ ಮುಂಚೆಯೇ ಒಬ್ಬ ದೂರುದಾರನ ಹೇಳಿಕೆಯ ಆಧಾರದ ಮೇಲೆ ಎಸ್.ಐ.ಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರು. ಆ ತನಿಖೆಯ 6ನೇ ಹಂತದಲ್ಲಿ ಮನುಷ್ಯನ ದೇಹದ ಅಸ್ಥಿಪಂಜರದ ಕೆಲವು ಮೂಳೆಗಳು ಸಿಗಿವೆ.

ಇನ್ನೂ ನಿನ್ನೆ, ಎಸ್.ಐ.ಟಿ ಕಚೇರಿಗೆ ಮತ್ತೊಬ್ಬ ದೂರುದಾರ ಬಂದು, “ಹದಿನೈದು ವರ್ಷದ ಬಾಲಕಿಯ ಶವವನ್ನು ಹೂತಿಡುವುದನ್ನು ನಾನೇ ನೋಡಿದ್ದೇನೆ, ನಾನು ಅದಕ್ಕೆ ಪ್ರತ್ಯಕ್ಷ ಸಾಕ್ಷಿ” ಎಂದು ಹೇಳಿಕೆ ನೀಡಿದ್ದಾರೆ. ಇದು ಈ ಪ್ರಕರಣಕ್ಕೆ ಇನ್ನೊಂದು ಹೊಸ ತಿರುವನ್ನು ನೀಡಿದೆ.

ಈ ಪ್ರಕರಣಕ್ಕೆ ಮತ್ತೊಂದು ಮಹತ್ವದ ತಿರುವು ಸಿಕ್ಕಿದೆ. ಎಸ್.ಐ.ಟಿ ಅಧಿಕಾರಿಗಳ ಮುಂದೆ ಮತ್ತೊಬ್ಬ ದೂರುದಾರ (ಜಯಂತ್) ಪ್ರತ್ಯಕ್ಷ ಸಾಕ್ಷಿಯಾಗಿ, “ಪ್ರಕರಣ ದಾಖಲಾಗದೆ ಶವವನ್ನು ಹೂತಿಡಲಾಗಿದೆ. ಅದನ್ನು ಹೂತಿಟ್ಟ ಸ್ಥಳ ನನಗೆ ತಿಳಿದಿದೆ. ನಾನೇ ಅದಕ್ಕೆ ನೇರ ಸಾಕ್ಷಿ. ನಾನು ಇಂದೇ ಎಸ್.ಐ.ಟಿ ಅಧಿಕಾರಿಗಳಿಗೆ ಆ ಸ್ಥಳವನ್ನು ತೋರಿಸುತ್ತೇನೆ” ಎಂದು ಹೇಳಿಕೆ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಇಚ್ಚಿಲಂಪಾಡಿ ನಿವಾಸಿ ಜಯನ್ ಎಂಬ ಸಾಕ್ಷಿ, “ಹದಿನೈದು ವರ್ಷಗಳ ಹಿಂದೆ ಒಬ್ಬ ಬಾಲಕಿಯ ಮೃತದೇಹವನ್ನು ನೋಡಿದ್ದೇನೆ. ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಆ ಬಾಲಕಿಯ ಶವವನ್ನು ಗುಪ್ತವಾಗಿ ಹೂತಿಡಲಾಗಿತ್ತು. ಪ್ರಕರಣವನ್ನು ದಾಖಲು ಮಾಡದೇ ಶವವನ್ನು ಮರೆಮಾಡಲಾಗಿತ್ತು. ಆದರೆ, ಅದನ್ನು ಹೂತಿಟ್ಟ ಸ್ಥಳ ನನಗೆ ಗೊತ್ತು” ಎಂದು ಎಸ್.ಐ.ಟಿ ಅಧಿಕಾರಿಗಳ ಕಚೇರಿಗೆ ಬಂದು ಹೇಳಿಕೆ ನೀಡಿದ್ದಾರೆ. ಅಧಿಕಾರಿಗಳು ಅವರಿಗೆ ಸೋಮವಾರ ಮತ್ತೆ ಬರುವಂತೆ ಹೇಳಿದ್ದಾರೆ.

error: Content is protected !!