August 6, 2025
DeWatermark.ai_1751689673430-696x757

ಉಡುಪಿ: ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಪ್ರಭಾಕರ ದೇವಾಡಿಗ (46) ಎಂಬವರು ಕೂಲಿ ಕೆಲಸ ಮಾಡುತ್ತಿದ್ದು, ಮಧ್ಯಪಾನ ಮಾಡುವ ಚಟ ಹೊಂದಿದ್ದಾರೆ. ಇತ್ತೀಚೆಗೆ ಹಲವು ಬಾರಿ ಅವರು ಕೆಲಸಕ್ಕೆಂದು ಮನೆಯಿಂದ ಹೋದ ಬಳಿಕ 2-3 ತಿಂಗಳುಗಳು ಮನೆಗೆ ಬಾರದ ಘಟನೆಗಳು ಸಂಭವಿಸಿದ್ದವು.

2023ರ ಡಿಸೆಂಬರ್ ತಿಂಗಳಲ್ಲಿ ಮನೆಯಿಂದ ಹೋದ ಬಳಿಕ ಅವರು ಇಂದಿಗೂ ಮನೆಗೆ ಬಾರದೆ, ಸಂಬಂಧಿಕರ ಮನೆಯಿಗೂ ಭೇಟಿ ನೀಡದೆ ನಾಪತ್ತೆಯಾಗಿರುವುದು ಸ್ಪಷ್ಟವಾಗಿದೆ.

ಪ್ರಭಾಕರ ದೇವಾಡಿಗರು 5 ಅಡಿ 5 ಇಂಚು ಎತ್ತರ, ಸಾಧಾರಣ ಶರೀರ ಹಾಗೂ ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ, ತುಳು, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ಮಾತನಾಡುತ್ತಾರೆ.

ಇವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿದ್ದಲ್ಲಿ, ದಯವಿಟ್ಟು ಹೆಬ್ರಿ ಪೊಲೀಸ್ ಠಾಣೆ (ದೂರವಾಣಿ: 08253-251116), ಪಿಎಸ್‌ಐ ಮೊಬೈಲ್: 9480805463, ಕಾರ್ಕಳ ವೃತ್ತ ನಿರೀಕ್ಷಕರ ಕಚೇರಿ (ದೂರವಾಣಿ: 08258-231083, ಮೊಬೈಲ್: 9480805435) ಗೆ ಸಂಪರ್ಕಿಸುವಂತೆ ಹೆಬ್ರಿ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

error: Content is protected !!