August 7, 2025
horatti-resing

ಹುಬ್ಬಳ್ಳಿ, ಮಾರ್ಚ್ 24: ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಪ್ರಕರಣದ ಚರ್ಚೆ ತೀವ್ರವಾಗುತ್ತಿರುವ ನಡುವೆಯೇ ಮತ್ತೊಂದು ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ. ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರ ರಾಜೀನಾಮೆ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ಈ ರಾಜೀನಾಮೆ ಪತ್ರದಲ್ಲಿ ಮಾರ್ಚ್ 18ನೇ ತಾರೀಖು ನಮೂದಾಗಿದ್ದು, ಬಸವರಾಜ್ ಹೊರಟ್ಟಿ ಅವರ ಸಹಿ ಇಲ್ಲ. ಈ ಕಾರಣದಿಂದಲೇ ರಾಜೀನಾಮೆ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ನಿನ್ನೆ (ಮಾರ್ಚ್ 23) ಬೆಳಗ್ಗೆ ಮಾಧ್ಯಮಗಳ ಎದುರು ಮಾತನಾಡಿದ ಅವರು, ಸ್ವತಃ ರಾಜೀನಾಮೆ ನೀಡುವ ಬಗ್ಗೆ ಘೋಷಿಸಿದ್ದರು. ಆದರೆ, ಅವರ ರಾಜೀನಾಮೆ ಪತ್ರ ಈಗಾಗಲೇ ಪರಿಷತ್ ಉಪಸಭಾಪತಿ ಪ್ರಾಣೇಶ್ ಅವರಿಗೆ ರವಾನಿಸಿರುವ ಬಗ್ಗೆ ಸುದ್ದಿಯಾಗಿದೆ.

ಮಾರ್ಚ್ 18ರಂದು ರವಾನಿಸಿರುವ ಈ ಪತ್ರದಲ್ಲಿ, “ನಾನು ವೈಯಕ್ತಿಕ ಕಾರಣಗಳಿಂದಾಗಿ ಎಪ್ರಿಲ್ 1, 2025ರಿಂದ ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಇದನ್ನು ಮಾರ್ಚ್ 31ರೊಳಗೆ ಸ್ವೀಕರಿಸಿ, ತಕ್ಷಣ ಅನ್ವಯವಾಗುವಂತೆ ಕ್ರಮ ಕೈಗೊಳ್ಳಲು ವಿನಂತಿಸುತ್ತೇನೆ” ಎಂದು ಉಲ್ಲೇಖಿಸಲಾಗಿದೆ. ಆದರೆ, ಪತ್ರದ ಕೊನೆಯಲ್ಲಿ ಅವರ ಸಹಿ ಇಲ್ಲದಿರುವುದು ಅನುಮಾನಗಳಿಗೆ ಕಾರಣವಾಗಿದೆ.

ಈ ರಾಜೀನಾಮೆ ಪತ್ರದ ಸತ್ಯಾಸತ್ಯತೆ ಹಾಗೂ ಅನುಮಾನಗಳಿಗೆ ಇನ್ನೂ ಸ್ಪಷ್ಟತೆ ಸಿಗಬೇಕಾಗಿದೆ.

error: Content is protected !!