
ಶ್ರೀ ಕೋರ‍್ದಬ್ಬು ದೈವಸ್ಥಾನ
ನಡಿಯಾಳ್, ಎರ್ಮಾಳು ತೆಂಕ, ಉಡುಪಿ ಜಿಲ್ಲೆ .
ಭಗವಾನ್ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ವಾರ್ಷಿಕ ಸಿರಿ ಸಿಂಗಾರದ ನೇಮೋತ್ಸವವು 04-04-2025 ಮತ್ತು 05-04-2025 ರಂದು ನಡೆಯಲಿದೆ.
ಕಾರ್ಯಕ್ರಮಗಳು -;
ತಾರೀಕು 04-04-2025ನೇ ಶುಕ್ರವಾರ ರಾತ್ರಿ ಗಂಟೆ 10:00ರಿಂದ ಶ್ರೀ ಬಬ್ಬುಸ್ವಾಮಿ ಮತ್ತು ತನ್ನಿಮಾನಿಗ ದೈವಗಳ ನೇಮೋತ್ಸವ.
ಮರುದಿನ ಬೆಳ್ಳಿಗೆ ತಾರೀಕು 05-04-2025 ನೇ ಶನಿವಾರ ಬೆಳಿಗ್ಗೆ ಗಂಟೆ 9:30ರಿಂದ ಸಂಜೆ ಗಂಟೆ 6-00ರ ವರೆಗೆ ಧೂಮಾವತಿ ಮತ್ತು ಬಂಟ ಹಾಗು ಗುಳಿಗ ದೈವಗಳ ನೇಮೋತ್ಸವವು ಜರಗಲಿರುವುದು.
ಈ ಪುಣ್ಯ ಕಾರ್ಯದಲ್ಲಿ ತಾವೆಲ್ಲರೂ ಕುಟುಂಬ ಸಮೇತರಾಗಿ ಭಾಗವಹಿಸಿ, ದೈವದ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ತನು-ಮನ-ಧನಗಳಿಂದ ಸಹಕರಿಸಿ, ಶ್ರೀ ದೈವದ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುವ ,
ತಮ್ಮ ಆಗಮನಾಭಿಲಾಷಿಗಳು
ತೆಂಕ ಗ್ರಾಮಸ್ಥರು ಹಾಗು ಹತ್ತು ಸಮಸ್ತರು ನಡಿಯಾಳ್ ಕರೆ
ನೇಮೋತ್ಸವದ ಪ್ರಯುಕ್ತ ತಾರೀಕು 04-04-2025 ರಂದು ಮದ್ಯಾಹ್ನ ಗಂಟೆ 12:30ರಿಂದ ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿದೆ.
( ಅನ್ನಸಂತರ್ಪಣೆ ಸೇವಾಕರ್ತರು : ಸ್ವರ್ಣ ಕಮಲ ಇಂಟರ್ ಪ್ರೈಸಸ್ , ಎರ್ಮಾಳು)