August 6, 2025
silhouette-man-rope-noose-on-260nw-2003084297

ಶಿರ್ವ: ಉಡುಪಿ ಜಿಲ್ಲೆಯ ಕಾಪು ಸಮೀಪದ ಶಿರ್ವದಲ್ಲಿ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ಮೃತ ಯುವಕನನ್ನು ರಂಜನ್ ಎಂದು ಗುರುತಿಸಲಾಗಿದೆ.

ರಂಜನ್ ಕಳೆದ ಕೆಲವು ವರ್ಷಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆಯ ವಿವರ:
ಪಿರ್ಯಾದಿದಾರ ಶ್ರೀಮತಿ ಮಂಜುಳಾ ಸತೀಶ್ ಶೆಟ್ಟಿ (43), ಬೆಳಪು ಗ್ರಾಮ, ಕಾಪು ತಾಲೂಕಿನವರು. ಆತ್ಮಹತ್ಯೆ ಮಾಡಿಕೊಂಡ ರಂಜನ್ (35) ಅವರ ತಾಯಿಯ ಅಣ್ಣನ ಮಗನಾಗಿದ್ದು, ಅವರ ತಂದೆ-ತಾಯಿ ಇತ್ತೀಚೆಗೆ ನಿಧನರಾಗಿದ್ದರು. ರಂಜನ್ ಅವರು ಅವಿವಾಹಿತರಾಗಿದ್ದು, ಒಬ್ಬರೇ ತಮ್ಮ ಮನೆಯಲ್ಲಿ ವಾಸಿಸುತ್ತಿದ್ದರು. ಅವರಿಬ್ಬರು ಅಕ್ಕಂದಿರು ಮುಂಬೈನಲ್ಲಿ ವಾಸಿಸುತ್ತಿದ್ದಾರೆ.

ರಂಜನ್ ಅವರು ಕಳೆದ ಐದು ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು ಹಾಗೂ ಉಡುಪಿ ಬಾಳಿಗಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಹೋಗುತ್ತಿದ್ದರು. ಅವರು ಪ್ರತಿದಿನ ಪಿರ್ಯಾದಿದಾರರ ಮನೆಯಲ್ಲಿ ಊಟ ಮಾಡುತ್ತಿದ್ದರು.

ಜುಲೈ 5 ರಂದು ರಾತ್ರಿ 9:15ಕ್ಕೆ ಪಿರ್ಯಾದಿದಾರರ ಮನೆಯಲ್ಲಿ ಊಟ ಮುಗಿಸಿ ತಮ್ಮ ಮನೆಗೆ ತೆರಳಿದ್ದರು. ಆದರೆ ಜುಲೈ 6ರ ಬೆಳಿಗ್ಗೆ 8:00 ಗಂಟೆಯಾದರೂ ಮನೆ ಕಡೆ ಬಾರದೇ ಇದ್ದುದನ್ನು ಗಮನಿಸಿದ ಪಿರ್ಯಾದಿದಾರರು ಅವರ ಮನೆಗೆ ಹೋಗಿ ಕರೆದು ನೋಡಿದರು. ಮನೆಯ ಬಾಗಿಲು ಒಳಗಿನಿಂದ ಚಿಲಕ ಹಾಕಲಾಗಿತ್ತು. ಕಿಟಕಿಯಿಂದ ನೋಡಿದಾಗ ರಂಜನ್ ಅವರು ಮನೆಯ ಚಾವಡಿಯಲ್ಲಿ ಮರವೊಂದಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡುಬಂದಿದೆ.

ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 11/2025, BNSS ಕಲಂ 194ರಂತೆ ಪ್ರಕರಣ ದಾಖಲಾಗಿದೆ.

error: Content is protected !!