August 5, 2025
IMG-20250729-WA0661-640x335

ಶಿರಾಡಿ: ಟ್ಯಾಂಕರೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಗೆ ಮಗುಚಿ ಬಿದ್ದ ಘಟನೆ ಉಪ್ಪಿನಂಗಡಿ ಸಮೀಪದ ಶಿರಾಡಿ ಘಾಟ್‌ನಲ್ಲಿ ನಡೆದಿದೆ.

ಈ ಘಟನೆ ಶಿರಾಡಿ ಗಡಿ ದೇವಸ್ಥಾನದ ಮೇಲ್ಭಾಗದ ಪರಿಸರದಲ್ಲಿ ಸಂಭವಿಸಿದೆ. ಅಪಘಾತದ ರಭಸದಿಂದ ಟ್ಯಾಂಕರ್ ಗುಂಡ್ಯ ಹೊಳೆಗೆ ಉರುಳುವ ಭೀತಿ ಇದ್ದರೂ, ಹೆದ್ದಾರಿ ಬದಿಯ ಮರಗಳು ತಡೆ ನೀಡಿದವು.

ಘಟನಾ ಸ್ಥಳಕ್ಕೆ ಸಕಲೇಶಪುರ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

error: Content is protected !!