August 5, 2025
reticulated-python-Malayopython-reticulatus

ಅಮಾಸೆಬೈಲು: ಕುಂದಾಪುರದ ಬಳಿ ಇರುವ ಅಮಾಸೆಬೈಲು ಎಂಬ ಸ್ಥಳದಲ್ಲಿ, ಮನೆಯ ಹಿಂಬದಿ ತೋಟದಲ್ಲಿ ಒಂದು ವಿಷಪೂರಿತ ಹಾವು ಕಚ್ಚಿದ 8 ವರ್ಷದ ಬಾಲಕಿ ಸಾವನ್ನಪ್ಪಿದಳು.

ಮೃತಳಾದ ಬಾಲಕಿಯ ಹೆಸರು ಸನ್ನಿಧಿ ಎಂದು ತಿಳಿದುಬಂದಿದೆ.

ಘಟನೆಯ ವಿವರ:
ಹೆಬ್ರಿ ತಾಲ್ಲೂಕಿನ ಶೇಡಿಮನೆ ಗ್ರಾಮದ ವಾಸಿ ಶ್ರೀಧರ (45) ಕೃಷಿಕಾರ್ಯದಲ್ಲಿ ನಿರತರಾಗಿದ್ದರು. 03/08/2025ರಂದು, ಅವರು ತಮ್ಮ ಮನೆಯ ಪಕ್ಕದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ, ಅವರ ಮಗಳು ಸನ್ನಿಧಿ (8) ಅವರೊಂದಿಗೆ ಇದ್ದಳು. ಆ ದಿನ ಶಾಲೆಗೆ ರಜೆಯಿದ್ದ ಕಾರಣ ಅವಳು ತಂದೆಯ ಜೊತೆ ತೋಟದಲ್ಲಿದ್ದಳು. ಸುಮಾರು 11:00 ಗಂಟೆಗೆ, ಒಂದು ವಿಷಕಾರಿ ಹಾವು ಅವಳನ್ನು ಕಚ್ಚಿತು. ಆಗ ಸನ್ನಿಧಿ ಭಯದಿಂದ ಓಡಿ ಮನೆಗೆ ಬಂದಳು. ಅವಳ ಬಲ ಕಾಲಿನ ಮಣಿಕಟ್ಟಿನ ಬಳಿ ಗಾಯವಾಗಿ ರಕ್ತ ಸೋರುತ್ತಿರುವುದನ್ನು ಕಂಡು, ಶ್ರೀಧರ ತಕ್ಷಣವೇ ಅವಳನ್ನು ಹೆಬ್ರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ಪಡೆದರು. ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಅವಳನ್ನು ಮಣಿಪಾಲ KMC ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ವೈದ್ಯರು ಚಿಕಿತ್ಸೆ ನೀಡಿದರೂ ಅದು ಫಲಕಾರಿಯಾಗಲಿಲ್ಲ. ಅಂತಿಮವಾಗಿ ಸನ್ನಿಧಿ ಮರಣಹೊಂದಿದಳು.

ಈ ಸಂಬಂಧದಲ್ಲಿ, ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ UDR ಕ್ರಮಾಂಕ 08/2025, ಕಲಂ: 194 BNSS ಪ್ರಕಾರ ಪ್ರಕರಣ ದಾಖಲಾಗಿದೆ.

error: Content is protected !!