
ಕುಂದಾಪುರ: ಮಹಿಳೆಗೆ ಲೋನ್ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂ. ವಂಚನೆ – ಕೋಟಿ ಮೌಲ್ಯದ ಚಿನ್ನಭರಣ ವಶಪಡಿಸಿಕೊಂಡ ಆರೋಪ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ನಿವಾಸಿ ಮಾಲತಿ ಎಂಬವರಿಂದ ಲೋನ್ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಹಣ ಮತ್ತು ಚಿನ್ನಾಭರಣ ವಂಚಿಸಿದ ಘಟನೆ ನಡೆದಿದೆ. ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2022ರ ಜನವರಿಯಲ್ಲಿ ಆರೋಪಿ ಸುಶೀಲ ಅವರು ತಾನು “ಚಾಲೆಂಜಿಂಗ್ ಪೌಂಡೇಶನ್” ಸಂಸ್ಥೆಯ ಸದಸ್ಯೆಯಾಗಿದ್ದು, ದಲಿತ ಸಂಘಟನೆಯ ಅಧ್ಯಕ್ಷೆಯೂ ಆಗಿರುವುದಾಗಿ ಪರಿಚಯಿಸಿ, ಸಂಸ್ಥೆಯಲ್ಲಿ ₹1.60 ಲಕ್ಷ ಡೆಪಾಸಿಟ್ ಮಾಡಿದರೆ ₹16 ಲಕ್ಷ ಲೋನ್ ಸಿಗುತ್ತದೆ ಎಂದು ನಂಬಿಸಿದ್ದಾಳೆ. ಈ ಲೋನ್‌ನಲ್ಲಿ ₹8 ಲಕ್ಷ ಸಬ್ಸಿಡಿ ದೊರೆಯುತ್ತದೆ ಎಂದು ಭರವಸೆ ನೀಡಿದಾರೆ.
ಮಾಲತಿ ಅವರು ಈ ಮಾತು ನಂಬಿ ₹1.60 ಲಕ್ಷ ಹಣವನ್ನು ನೀಡಿದ ಮೇಲೆ, ಸುಶೀಲ ಮತ್ತಷ್ಟು ಹಣ ಬೇಕು ಎಂದು ತಿಳಿಸಿದ್ದಾರೆ. ಹಣ ನೀಡಲಾಗದ ಕಾರಣ, ಚಿನ್ನಾಭರಣಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದು, ಅವುಗಳನ್ನು ಅಡಮಾನವಿಟ್ಟು ಲೋನ್ ಮಂಜೂರು ಮಾಡಿದ ಬಳಿಕ ಹಿಂದಿರುಗಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಅದರ ಮೇರೆಗೆ ಮಾಲತಿ ಅವರು ಸುಮಾರು ₹2.70 ಲಕ್ಷ ಮೌಲ್ಯದ 55 ಗ್ರಾಂ ತೂಕದ ಚಿನ್ನಾಭರಣ (20 ಗ್ರಾಂ ಕರಿಮಣಿ ಸರ, 4 ಗ್ರಾಂ ಉಂಗುರ, 31 ಗ್ರಾಂ ಹವಳದ ಸರ) ನೀಡಿದರೂ ಕೂಡ, ಆರೋಪಿ ಯಾವುದೇ ಲೋನ್ ಕೊಡಿಸದೇ, ಚಿನ್ನವನ್ನೂ ವಾಪಸ್ ನೀಡದೆ ವಂಚನೆ ಮಾಡಿದ್ದಾರೆ.
ಪರಿಣಾಮವಾಗಿ, ಮಾಲತಿ ಅವರು ಲೋನ್ ಇಲ್ಲದ ಕಾರಣವಾಗಿ ಹಣ ಅಥವಾ ಚಿನ್ನ ವಾಪಸ್ ಕೇಳಿದಾಗ, ಸುಶೀಲ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಜಾತಿ ಆಧಾರಿತ ನಿಂದನೆ ಕೂಡ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಜೊತೆಗೆ “ನಿನ್ನ ಮೇಲೆ ಕೇಸು ಹಾಕುತ್ತೇನೆ” ಎಂದು ಬೆದರಿಕೆಯೂ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಾಲತಿ ಅವರ ದೂರಿನನಂತರ, ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 127/2025 ಅಡಿಯಲ್ಲಿ IPC ಸೆಕ್ಷನ್‌ಗಳು 318(2), 318(3), 318(4), 352, 351(2) ಹಾಗೂ BNS 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.