
ಬೆಂಗಳೂರು: ನಗರದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್‌ಗೆ ಮೀಸಲಿಟ್ಟ ಸ್ಥಳದಲ್ಲಿ ರೀಲ್ಸ್ ಮಾಡುತ್ತಿದ್ದ ವೇಳೆ 13ನೇ ಮಹಡಿಯಿಂದ ಬಿದ್ದು ಯುವತಿಯೋರ್ವಳು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಸಂಭವಿಸಿದೆ.
ಮೃತ ಯುವತಿ ಬಿಹಾರ ಮೂಲದ ನಂದಿನಿ ಎಂದು ಗುರುತಿಸಲಾಗಿದೆ. ಆಕೆ ನಗರದ ಶಾಪಿಂಗ್ ಮಾರ್ಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು.
ನಂದಿನಿ ತಮ್ಮ ಸ್ನೇಹಿತರೊಂದಿಗೆ ನಿರ್ಮಾಣ ಹಂತದ ಕಟ್ಟಡದ ಬಳಿ ಪಾರ್ಟಿ ಮಾಡಲು ಹೋಗಿದ್ದಳು. ಪಾರ್ಟಿಯ ವೇಳೆ ಪ್ರೇಮ ಸಂಬಂಧದ ವಿಚಾರವಾಗಿ ಮಾತುಕತೆ ನಡೆಯಿತು. ಈ ವೇಳೆ ಗಲಾಟೆ ಉಂಟಾಗಿ, 12 ವರ್ಷಗಳ ಪ್ರೀತಿ ಸಂಬಂಧ ಮುರಿದು ಬಿದ್ದಿತ್ತು. ಇದರಿಂದ ಖಿನ್ನತೆಯಾದ ನಂದಿನಿ ಸ್ಯಾಡ್ ರೀಲ್ಸ್ ಮಾಡಲು ನಿರ್ಧರಿಸಿದ್ದಳು. ಆದರೆ ರೀಲ್ಸ್ ಮಾಡುವಾಗ ಎಲ್ಲಿ ಇದ್ದೇನೆ ಎಂಬುದನ್ನು ಮರೆತಿದ್ದ ನಂದಿನಿ ಕಟ್ಟಡದ 13ನೇ ಮಹಡಿಯಿಂದ ಲಿಫ್ಟ್‌ಗಾಗಿ ಬಿಡಲಾಗಿದ್ದ ಸ್ಥಳದ ಮೂಲಕ ಕೆಳಗೆ ಬಿದ್ದು ಮೃತಪಟ್ಟಳು.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮಹತ್ವದ ಮಾಹಿತಿ ಹೊರಬಂದಿದೆ. ನಂದಿನಿ 12 ವರ್ಷಗಳ ಪ್ರೇಮ ವಿಫಲತೆಯನ್ನು ಮರೆತಿರಲಿಲ್ಲ. ಸ್ನೇಹಿತರೊಂದಿಗೆ ಮದ್ಯಪಾನ ಮಾಡಿಕೊಂಡಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಸ್ಯಾಡ್ ರೀಲ್ಸ್ ಮಾಡುವಾಗ ಅಜಾಗರೂಕತೆಯಿಂದ ಕಾಲು ಜಾರಿ ಬಿದ್ದಿದ್ದಾಳೆ ಎಂದು ತಿಳಿದು ಬಂದಿದೆ.