August 3, 2025
Screenshot_20250718_1750572-640x442

ಬ್ರಹ್ಮಾವರ (ಉಡುಪಿ ಜಿಲ್ಲೆ):
ಯುವತಿಯೊಬ್ಬಳು ಮಾನಸಿಕ ಒತ್ತಡದಿಂದ ಜೀವನದಲ್ಲಿ ನಿರಾಸೆಗೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ಸಮೀಪ ನಡೆದಿದೆ.

ಆತ್ಮಹತ್ಯೆ ಮಾಡಿದ ಯುವತಿ ರಶ್ಮಿತಾ (20) ಎಂದು ಗುರುತಿಸಲಾಗಿದೆ. ಈಕೆ ಚೇರ್ಕಾಡಿ ಗ್ರಾಮದ ನಿವಾಸಿ ರಾಮ್ (53) ಅವರ ಪುತ್ರಿ.

ರಶ್ಮಿತಾ B.Sc ನರ್ಸಿಂಗ್‌ ವ್ಯಾಸಂಗ ಮಾಡುತ್ತಿದ್ದಳು. ಪರೀಕ್ಷೆಯಲ್ಲಿ ಫೇಲ್ ಆದ ಬಳಿಕ ಕಳೆದ ಆರು ತಿಂಗಳಿಂದ ಕಾಲೇಜಿಗೆ ಹೋಗದೇ ಮನೆಯಲ್ಲಿಯೇ ಇದ್ದಳು. ಇದಲ್ಲದೇ ಕಳೆದ ಎರಡು ತಿಂಗಳುಗಳಿಂದ ಮಾನಸಿಕ ಸಮಸ್ಯೆಗಾಗಿ ಚಿಕಿತ್ಸೆ ಪಡೆಯುತ್ತಿದ್ದಳು.

ಈ ಹೊತ್ತಿನಲ್ಲೇ, 17/07/2025 ರಂದು ಮಧ್ಯಾಹ್ನ 2 ರಿಂದ 2:45ರ ಮಧ್ಯೆ ಮನೆಯಲ್ಲಿದ್ದ ಕೋಣೆಯ ಫ್ಯಾನಿಗೆ ಶಾಲು ಕಟ್ಟಿಕೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಯುಡಿಆರ್‌ ನಂ. 50/2025ರಂತೆ BNSS ಕಲಂ 194 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

error: Content is protected !!