
ಬಾಗಲಕೋಟೆ: ಪ್ರಧಾನಿ ಮೋದಿ ಕುರಿತ ವಿವಾದಾತ್ಮಕ ಪೋಸ್ಟ್ – ಕಲಾದಗಿಯಲ್ಲಿ ಯುವಕನ ಬಂಧನ
ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ ಕಲಾದಗಿ ಪೊಲೀಸ್ ಠಾಣೆಯ ಪೊಲೀಸರು ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತನನ್ನು ಕಲಾದಗಿ ಪಟ್ಟಣದ ನಿವಾಸಿ, 27 ವರ್ಷದ ಮೊಹಮ್ಮದ್ ಅಜೀಜ್ ರೋಣ ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ಮೋದಿ ಅವರ ಫೋಟೋವನ್ನು ಜೈಲಿನಲ್ಲಿ ಇರುವಂತೆ ಎಡಿಟ್ ಮಾಡಿ, ಅದೇ ಪೋಸ್ಟಿನಲ್ಲಿ ಅಸದುದ್ದೀನ್ ಓವೈಸಿಯನ್ನು ಪೊಲೀಸ್ ಅಧಿಕಾರಿ ವೇಷದಲ್ಲಿ ತೋರಿಸುವ ರೀತಿಯಲ್ಲಿ ಚಿತ್ರ ಸಂಶೋಧನೆ ಮಾಡಿದ್ದನು.
ಈ ವಿಷಯವು ಗಮನಕ್ಕೆ ಬಂದ ಬೆನ್ನಲ್ಲೇ, ಕಲಾದಗಿ ಪೊಲೀಸರು ಸ್ವಯಂ ಪ್ರೇರಿತವಾಗಿ (ಸೂ ಮೊಟೋ) ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಸಾಮಾಜಿಕ ಜಾಲತಾಣದ ದುರೂಪಯೋಗದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.