
ಮುರುಡೇಶ್ವರ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಖಡ್ಡಾಯ: ಭಕ್ತರಿಗೆ ಹೊಸ ನಿಯಮ
ವಿಶ್ವದ ಮೂರನೇ ಅತಿದೊಡ್ಡ ಶಿವ ದೇವರ ಪ್ರತಿಮೆಯಿರುವ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುರುಡೇಶ್ವರ ದೇವಸ್ಥಾನಕ್ಕೆ ಪ್ರತಿವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಮೂರು ದಿಕ್ಕುಗಳಿಂದ ಸಮುದ್ರದಿಂದ ಆವರಿಸಲ್ಪಟ್ಟಿರುವ ಈ ದೇವಸ್ಥಾನ ಭಕ್ತಿಯ ಜೊತೆ ಸುಂದರ ಪ್ರವಾಸಿ ತಾಣವೂ ಆಗಿದೆ.
ಇದುವರೆಗೆ ಈ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಯಾವುದೇ ಉಡುಪು ಕುರಿತ ನಿರ್ಬಂಧಗಳಿರಲಿಲ್ಲ. ಆದರೆ ಇದೀಗ ದೇವಸ್ಥಾನದ ಆಡಳಿತ ಮಂಡಳಿ ಹೊಸ ವಸ್ತ್ರ ಸಂಹಿತೆ ಜಾರಿಗೆ ತಂದಿದ್ದು, ಭಕ್ತರು ಖಂಡಿತವಾಗಿ ಈ ನಿಯಮ ಪಾಲಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಹೊಸ ವಸ್ತ್ರ ಸಂಹಿತೆಯ ವಿವರ:
- ಪುರುಷರು: ಅಂಗಿ, ಧೋತಿ, ಕುರ್ತಾ-ಪೈಜಾಮಾ ಅಥವಾ ಇತರೆ ಭಾರತೀಯ ಸಾಂಪ್ರದಾಯಿಕ ಉಡುಪು ಧರಿಸಬೇಕು.
- ಮಹಿಳೆಯರು: ಸೀರೆ, ಚೂಡಿದಾರ್ ಅಥವಾ ಇತರ ಭಾರತೀಯ ಸಾಂಪ್ರದಾಯಿಕ ಉಡುಗೆಗಳನ್ನು ಮಾತ್ರ ಧರಿಸಬೇಕು.
ಈ ಹೊಸ ನಿಯಮದ ಮಾಹಿತಿ ದೇವಸ್ಥಾನದ ಹೊರಗಡೆ ಫಲಕಗಳಲ್ಲಿ ಪ್ರಕಟಿಸಲಾಗಿದ್ದು, ಸ್ಥಳದಲ್ಲಿಯೇ ಬೋರ್ಡ್‌ಗಳ ಮೂಲಕ ಭಕ್ತರಿಗೆ ಸೂಚನೆ ನೀಡಲಾಗಿದೆ. ಭಕ್ತರು ಈ ವಸ್ತ್ರ ಸಂಹಿತೆಯನ್ನು ತಪ್ಪದೇ ಪಾಲಿಸಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ವಿನಂತಿಸಿದೆ.
