August 5, 2025
Aishwarya-Rai

ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಕಾರಿಗೆ ಜುಹು ಉಪನಗರದಲ್ಲಿ ಬಸ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈನ ಬ್ರಿಯಿಹಾನ್ ಎಲೆಕ್ಟ್ರಿಕ್‌ ಸಪ್ಲೈ ಅಂಡ್‌ ಟ್ರಾನ್ಸ್‌ಪೋರ್ಟ್‌ (BEST) ಸಂಸ್ಥೆಯ ಬಸ್, ನಟಿಯ ಐಷಾರಾಮಿ ಕಾರಿಗೆ ಅಪಘಾತಕ್ಕೀಡಾಗಿದೆ. ಆದರೆ ಘಟನೆ ವೇಳೆ ಐಶ್ವರ್ಯಾ ರೈ ಕಾರಿನಲ್ಲಿ ಇಲ್ಲದ ಕಾರಣ ಯಾವುದೇ ತೀವ್ರ ಅನಾಹುತವಾಗಿಲ್ಲ. ನಂಬರ್ ಪ್ಲೇಟ್ ಪರಿಶೀಲನೆ ಬಳಿಕ ಕಾರು ನಟಿಯದ್ದೇ ಎಂಬುದು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿದ್ದಾರೆ.

ಘಟನೆಯ ದೃಶ್ಯಗಳ ಫೋಟೋ ಹಾಗೂ ವೀಡಿಯೋಗಳು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಅಪಘಾತದ ಬಳಿಕ ಅಮಿತಾಬ್ ಬಚ್ಚನ್ ಅವರ ನಿವಾಸದ ಬೌನ್ಸರ್‌ ಬಸ್‌ ಚಾಲಕನಿಗೆ ಕಪಾಳಕ್ಕೆ ಹೊಡೆದಿರುವ ವಿಡಿಯೋ ಕೂಡ ಸದ್ದು ಮಾಡುತ್ತಿದೆ.

ಅಪಘಾತದ ನಂತರ ಸ್ವಲ್ಪ ಗೊಂದಲ ಉಂಟಾದರೂ, ಬೌನ್ಸರ್‌ ಪೊಲೀಸರ ಎದುರು ಕ್ಷಮೆ ಕೋರಿರುವುದಾಗಿ BEST ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

error: Content is protected !!