August 7, 2025
images

ಬೆಂಗಳೂರು: ಕರ್ನಾಟಕದ ಎಲ್ಲೆಡೆ ಮಳೆಗೆ ಮತ್ತೆ ಚೇತನ ಬಂದಿದೆ. ಕೇವಲ ಕರಾವಳಿ ಪ್ರದೇಶಗಳಿಗೆ ಮಾತ್ರವಲ್ಲ, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವಾರು ಭಾಗಗಳಲ್ಲಿ ಮುಂದಿನ ಮೂರು ದಿನಗಳವರೆಗೆ ಭಾರೀ ಮಳೆ ಸಂಭವಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಆರೆಂಜ್ ಅಲರ್ಟ್ ಜಾರಿ: ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ಆರೆಂಜ್ ಎಚ್ಚರಿಕೆ ಜಾರಿ ಮಾಡಲಾಗಿದೆ.

ಯೆಲ್ಲೋ ಅಲರ್ಟ್: ವಿಜಯನಗರ, ಕೋಲಾರ, ಹಾಸನ, ದಾವಣಗೆರೆ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಯಚೂರು, ಕೊಪ್ಪಳ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಿಗೆ ಹಳದಿ ಎಚ್ಚರಿಕೆ ನೀಡಲಾಗಿದೆ.

ಪ್ರಮುಖ ಮಳೆ ದಾಖಲೆಗಳು:

  • ವಿಜಯಪುರ, ಮಂಕಿ, ಲಕ್ಷ್ಮೇಶ್ವರ, ಬೆಳ್ತಂಗಡಿ, ಗೇರುಸೊಪ್ಪ, ಸಿದ್ದಾಪುರ, ಅಂಕೋಲಾ, ಕದ್ರಾ, ಶಿರಹಟ್ಟಿ, ತಾವರಗೇರಾ, ಬೀದರ್, ಹುನಗುಂದ, ಬೆಳ್ಳಟ್ಟಿ, ದೇವರಹಿಪ್ಪರಗಿ, ಲೋಕಾಪುರ, ಗುಳೇಗೋಡು, ರಾಂಪುರ, ಬಾಳೆಹೊನ್ನೂರು, ಕಳಸ, ಬೆಳ್ಳೂರು, ಹಗರಿಬೊಮ್ಮನಹಳ್ಳಿ, ಹಿರಿಯೂರು, ಜಯಪುರ – ಈ ಪ್ರದೇಶಗಳಲ್ಲಿ ಭಾರೀ ಮಳೆ ದಾಖಲಾಗಿದೆ.
  • ಕಾರ್ಕಳ, ಕುಮಟಾ, ಇಂಡಿ, ಝಲ್ಕಿ, ನಲ್ವತವಾಡ, ಮೂಡುಬಿದಿರೆ, ಧರ್ಮಸ್ಥಳ, ಉಡುಪಿ, ಪುತ್ತೂರು, ಮುದ್ದೇಬಿಹಾಳ, ಶಿಗ್ಗಾಂವ್, ಸವಣೂರು, ಸಿಂದಗಿ, ಸೈದಾಪುರ, ಕೆರೂರು, ಇಳಕಲ್, ಕುರ್ಡಿ, ಬೆಂಗಳೂರು ಕೆಐಎಎಲ್, ಹೊಳಲ್ಕೆರೆ, ಕಮ್ಮರಡಿ, ನಾಗಮಂಗಲ, ಶೃಂಗೇರಿ, ಮೈಸೂರು, ಹೊಸದುರ್ಗಾ, ಕೊಟ್ಟಿಗೆಹಾರ, ವೈಎನ್ ಹೊಸಕೋಟೆ, ಚಿಟಗುಪ್ಪ, ಆಲಮಟ್ಟಿ, ನರಗುಂದ, ರೋಣ – ಇಲ್ಲಿ ಸಹ ಮಳೆ ದಾಖಲಾಗಿದೆ.
  • ಹಿಡಕಲ್, ಕಿಬ್ಬನಹಳ್ಳಿ, ಭಾಗಮಂಡಲ, ಬಂಟವಾಳ, ಗೋಕರ್ಣ, ಮಂಗಳೂರು, ಮುಲ್ಕಿ, ಅಥಣಿ, ಬನವಾಸಿ, ಜಾಲಹಳ್ಳಿ, ಅಣ್ಣಿಗೆರೆ, ಬಸವನ ಬಾಗೇವಾಡಿ, ಹುಕ್ಕೇರಿ, ಎನ್ಆರ್ ಪುರ, ಚಿಕ್ಕಬಳ್ಳಾಪುರ, ಬಾದಾಮಿ, ಮುದಗಲ್, ಕುಂದಗೋಳ, ಬೇಗೂರು, ಪೊನ್ನಂಪೇಟೆ, ಹೊನ್ನಾಳಿ, ಜೋಯ್ಡಾ, ಯಲಬುರ್ಗಾ, ಯಲ್ಲಾಪುರ, ಬಿಳಗಿ, ಬಂಡೀಪುರ, ಮಂಠಾಳ, ಭರಮಸಾಗರ, ಹುಂಚದಕಟ್ಟೆ, ಭದ್ರಾವತಿ, ಎಂಎಂ ಹಿಲ್ಸ್, ತ್ಯಾಗರ್ತಿ, ಚನ್ನರಾಯಪಟ್ಟಣ, ಕೋಲಾರ, ಚಾಮರಾಜನಗರ, ತರೀಕೆರೆ, ಪರಶುರಾಂಪುರ, ಅರಕಲಗೂಡು – ಈ ಪ್ರದೇಶಗಳಲ್ಲೂ ಮಳೆ ಬಿದ್ದಿದೆ.

ಬೆಂಗಳೂರು ಹವಾಮಾನ:

ಬೆಂಗಳೂರಿನಲ್ಲಿ ಬುಧವಾರ ಸಂಜೆಯಿಂದ ಬುಧವಾರ ಬೆಳಗ್ಗೆವರೆಗೂ ಮಳೆ ಸುರಿದಿದೆ.

  • ಎಚ್ಎಎಲ್: ಗರಿಷ್ಠ 28.5°C, ಕನಿಷ್ಠ 20.6°C
  • ನಗರ: ಗರಿಷ್ಠ 28.2°C, ಕನಿಷ್ಠ 20.5°C
  • ಕೆಐಎಎಲ್: ಗರಿಷ್ಠ 29.6°C, ಕನಿಷ್ಠ 20.8°C
  • ಜಿಕೆವಿಕೆ: ಗರಿಷ್ಠ 29.2°C, ಕನಿಷ್ಠ 19.0°C

error: Content is protected !!