March 18, 2025
aa

ಬೆಂಗಳೂರು: ಬೆಳಗಾವಿಯಲ್ಲಿ ಮರಾಠಿಗರ ಅಟ್ಟಹಾಸ, ಎಂಇಎಸ್ ನಿಷೇಧ, ಮಹದಾಯಿ ಯೋಜನೆ ತ್ವರಿತ ಜಾರಿಗೆ ಆಗ್ರಹಿಸಿ ಹಾಗೂ ಮೇಕೆದಾಟು ಯೋಜನೆ ವಿರೋಧಿಸುತ್ತಿರುವ ತಮಿಳುನಾಡು ಮತ್ತು ಕೇಂದ್ರ ಸರ್ಕಾರದ ನೀತಿಗೆ ವಿರೋಧ ಸೂಚಿಸಲು ಕನ್ನಡ ಚಳುವಳಿಯ ವಾಟಾಳ್ ನಾಗರಾಜ್ ಮಾರ್ಚ್ 22, 2025ರಂದು ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಿದ್ದಾರೆ.

ಬಂದ್ ಹಿನ್ನಲೆ:
ಈ ಕುರಿತು ಇಂದು ಬೆಂಗಳೂರಿನ ವುಡ್‌ಲ್ಯಾಂಡ್ಸ್ ಹೋಟೆಲ್‌ನಲ್ಲಿ ನಡೆದ ಕನ್ನಡಪರ ಸಂಘಟನೆಗಳ ಸಭೆಯ ಬಳಿಕ ಈ ನಿರ್ಧಾರ ಪ್ರಕಟಿಸಲಾಯಿತು. ಬೆಳಗಾವಿಯಲ್ಲಿ ಕನ್ನಡ ಕಂಡಕ್ಟರ್ ಮೇಲೆ ನಡೆದ ದಾಳಿಯ ತನಿಖೆ, ಹಿಂದಿ ಹೇರಿಕೆ ವಿರೋಧ, ಹಾಗೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಕುರಿತು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.

ಬಂದ್ ವೇಳೆ ಯಾವ ಸೇವೆಗಳು ಲಭ್ಯವಿರುತ್ತವೆ?

✅ ಮೆಡಿಕಲ್ ಶಾಪ್‌ಗಳು ತೆರೆದಿರುತ್ತವೆ
✅ ಹಾಲಿನ ಬೂತ್‌ಗಳು ಕಾರ್ಯ ನಿರ್ವಹಿಸಲಿದೆ
✅ ಹಣ್ಣು-ತರಕಾರಿ ಅಂಗಡಿಗಳು ಲಭ್ಯ
✅ ಅಗತ್ಯ ಸೇವೆಗಳ ಪೂರೈಕೆ ಎಂದಿನಂತೆ

ಬಂದ್ ವೇಳೆ ಯಾವ ಸೇವೆಗಳು ಸ್ಥಗಿತಗೊಳ್ಳಬಹುದು?

❌ ಹೋಟೆಲ್‌ಗಳು ಮುಚ್ಚಿರಬಹುದು
❌ ಸಿನಿಮಾ ಥಿಯೇಟರ್‌ಗಳು ಬಂದ್
❌ ಸರ್ಕಾರಿ ಕಚೇರಿಗಳು ತೆರೆದಿರುವುದು ಅನುಮಾನ
❌ ಶಾಲಾ-ಕಾಲೇಜುಗಳಿಗೆ ರಜೆ ಸಾಧ್ಯತೆ
❌ ಸಾರಿಗೆ ಬಸ್‌ಗಳು ಸಂಚರಿಸುವುದು ಅನುಮಾನ
❌ ಓಲಾ, ಉಬರ್, ಆಟೋ, ಲಾರಿ ಸಂಚಾರ ಕಡಿಮೆಯಾಗಬಹುದು
❌ ಮಾಲ್‌ಗಳು ಮತ್ತು ಖಾಸಗಿ ವ್ಯಾಪಾರ ಸಂಸ್ಥೆಗಳು ಮುಚ್ಚಿರಬಹುದು

ರೈಲು ಮತ್ತು ವಿಮಾನ ಸಂಚಾರಕ್ಕೆ ಹೆಚ್ಚಿನ ವ್ಯತ್ಯಯ ಉಂಟಾಗುವ ಸಾಧ್ಯತೆ ಕಡಿಮೆ.