
ಮಲ್ಪೆ : ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಕೊಡವೂರು ಎಂಬಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ನಡೆದಿದೆ.
ಆತ್ಮಹತ್ಯೆಗೊಳಗಾದ ಯುವಕನನ್ನು ಲಿಪು ಬೇಹರಾ (24) ಎಂದು ಗುರುತಿಸಲಾಗಿದೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ:
ಪಿರಿಯಾದಿದಾರರಾದ ಜೈರಾಮ್ ಭುಯಾನ್ (24), ಓಡಿಶಾ ರಾಜ್ಯದವರಾಗಿದ್ದು, ಪ್ರಸ್ತುತ ಕೊಡವೂರು ಗ್ರಾಮದಲ್ಲಿ ವಾಸವಿದ್ದಲ್ಲದೆ ಪಾಸ್ಟ್ ಫುಡ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು, ಲಿಪು ಬೇಹರಾ, ಬಾದಲ್ ಮಲ್ಲಿಕ್, ಸಾನು ಮತ್ತು ಕಾಳು ಎಂಬುವವರೊಂದಿಗೆ ಒಂದೇ ಮನೆಯಲ್ಲಿದ್ದುಕೊಂಡಿದ್ದರು.
ಜುಲೈ 8, 2025 ರಂದು ಸಂಜೆ 4:30ಕ್ಕೆ ಜೈರಾಮ್ ರವರು ರಕ್ತಪರೀಕ್ಷೆಗಾಗಿ ಮಲ್ಪೆ ನರ್ಸಿಂಗ್ ಹೋಮ್‌ಗೆ ತೆರಳಿ, ಬಳಿಕ ಮನೆಗೆ ಮರಳಿದ್ದರು. ಅಂದು ಲಿಪು ಬೇಹರಾ ರೂಮಿನೊಳಗಿದ್ದನು. ಸಂಜೆ 6:30ರ ವೇಳೆಗೆ ಲಿಪು ಮಧ್ಯಾಹ್ನದ ಊಟವನ್ನೇ ಮಾಡಿರಲಿಲ್ಲ. ಜೈರಾಮ್ ಅವರು ‘ಊಟ ಮಾಡಬೇಕೆ?’ ಎಂದು ಕೇಳಲು ಬಾಗಿಲು ಬಡಿದರೂ, ಲಿಪು ಪ್ರತಿಕ್ರಿಯೆ ನೀಡಲಿಲ್ಲ.
ಇದರಿಂದ ಆತಂಕಗೊಂಡ ಜೈರಾಮ್ ಅವರು ದಿನೇಶ್ ಎಂಬುವವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಅವರು ಮಲ್ಪೆ ಪೊಲೀಸರೊಂದಿಗೆ ಬಂದು ಬಾಗಿಲು ಒಡೆದು ಒಳನುಗ್ಗಿದಾಗ, ಲಿಪು ಬೇಹರಾ ತಾನು ಧರಿಸಿದ್ದ ಟ್ರ್ಯಾಕ್ ಪ್ಯಾಂಟ್‌ನ ಕಸಿಯಿಂದ ಕಿಟಕಿಗೆ ನೇಣು ಬಿಗಿದುಕೊಂಡು ಕುಳಿತುಕೊಂಡ ಸ್ಥಿತಿಯಲ್ಲಿ ಮೃತನಾಗಿ ಕಾಣಿಸಿಕೊಂಡನು.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಲಿಪು ಬೇಹರಾ ಮಾನಸಿಕ ಒತ್ತಡ ಅಥವಾ ಇತರ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದೆ. ಈ ಘಟನೆ ಜುಲೈ 8ರಂದು ಸಂಜೆ 4:30ರಿಂದ 6:30ರ ನಡುವಿನ ಸಮಯದಲ್ಲಿ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.
ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 38/2025 ಅಡಿಯಲ್ಲಿ BNSS ಕಲಂ 194 ಅನ್ವಯ ಪ್ರಕರಣ ದಾಖಲಿಸಲಾಗಿದೆ.