
ಮಲ್ಪೆ: ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ
ಉಡುಪಿ ಜಿಲ್ಲೆಯ ಮಲ್ಪೆ ಬಳಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರು ಕೆಳಾರ್ಕಳಬೆಟ್ಟು ಗ್ರಾಮದ ನಿವಾಸಿ, 16 ವರ್ಷದ ಸ್ವಸ್ತಿಕ್ ಎಂದು ಗುರುತಿಸಲಾಗಿದೆ.
ಇವರು ಉಡುಪಿಯ ಜ್ಞಾನ ಸುಧಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು.
ಮಲ್ಪೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಘಟನೆಯ ವಿವರ:
ಪಿರ್ಯಾದಿದಾರರಾದ ಜಯಂತಿ ಎಸ್ (42) ಅವರು ತಮ್ಮ ಮಗಸ್ವಸ್ತಿಕ್ ಜೊತೆಗೆ ಕೆಳಾರ್ಕಳಬೆಟ್ಟುವಿನಲ್ಲಿ ವಾಸವಾಗಿದ್ದಾರೆ. 27-07-2025 ರಂದು ಬೆಳಿಗ್ಗೆ 11:30ಕ್ಕೆ ತನ್ನ ಮಗಳ ಮೆಡಿಕಲ್ ಸರ್ಟಿಫಿಕೇಟ್ ತರಲು ನೇಜಾರಿಗೆ ಹೋದ ಜಯಂತಿ ಅವರು, ಮಧ್ಯಾಹ್ನ 12 ಗಂಟೆಗೆ ಮನೆಗೆ ಹಿಂದಿರುಗಿದಾಗ, ಮನೆಯ ಬಾಗಿಲು ತೆರದಿರುವುದನ್ನು ಗಮನಿಸಿದರು.
ಅವರು ಒಳಗೆ ಪ್ರವೇಶಿಸಿದಾಗ ಸ್ವಸ್ತಿಕ್ ಮನೆಯ ಹಾಲ್‌ನ ಉತ್ತರ ಬದಿಯ ಕಿಟಕಿಗೆ ಬೆಲ್ಟ್ ಕಟ್ಟಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ, ಸೋಫಾದ ಮೇಲೆ ಕುಳಿತಂತೆಯೇ ಮೃತನಾಗಿ ಕಂಡುಬಂದಿದ್ದಾರೆ. ಕೂಡಲೇ ಕುತ್ತಿಗೆಯಲ್ಲಿದ್ದ ಬೆಲ್ಟ್ ಅನ್ನು ಕತ್ತರಿಸಿ, ನೆರೆಮನೆಯವರ ಸಹಾಯದಿಂದ ಗೆರೊಟ್ಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರ ಸಲಹೆ ಮೇರೆಗೆ ನಂತರ ಉಡುಪಿಯ ಆದರ್ಶ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ವೈದ್ಯರು ಸ್ವಸ್ತಿಕ್ ಈಗಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು.
ಬೆಳಿಗ್ಗೆ 11:30ರಿಂದ ಮಧ್ಯಾಹ್ನ 1 ಗಂಟೆಯ ಮಧ್ಯೆ, ಯಾವುದೋ ಕಾರಣದಿಂದ ಸ್ವಸ್ತಿಕ್ ಕಿಟಕಿಗೆ ಬೆಲ್ಟ್ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ.
ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಕ್ರಮಾಂಕ 43/2025 ಅಡಿಯಲ್ಲಿ BNSS ಕಲಂ 194 ಪ್ರಕಾರ ಪ್ರಕರಣ ದಾಖಲಿಸಲಾಗಿದೆ.