
ಬೆಂಗಳೂರು: ಮನೆಯ ಮುಂದೆ ಇರುವ ಮರವನ್ನು ಕಡಿಯಬಾರದೆಂದು ಮನವಿ ಮಾಡಿದ ವ್ಯಕ್ತಿಯ ಮೇಲೆ ಕಾಂಗ್ರೆಸ್ ಕಾರ್ಯಕರ್ತ ಸುರೇಶ್ ಗೌಡ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಸುಂಕದಕಟ್ಟೆಯ ಶ್ರೀನಿವಾಸನಗರದಲ್ಲಿ ನಡೆದಿದೆ.
ಬಿಎಂಟಿಸಿ ನೌಕರ ಸುರೇಶ್ ಮೇಲೆ ಕಾಂಗ್ರೆಸ್ ಕಾರ್ಯಕರ್ತ ಸುರೇಶ್ ಗೌಡ ಗೂಂಡಾ ವರ್ತನೆ ತೋರಿದ್ದು, ಈ ಘಟನೆ ಭೀತಿಗೆ ಕಾರಣವಾಗಿದೆ.
ಮನೆ ಎದುರುಗಡೆಯ ವ್ಯಕ್ತಿ ಸುರೇಶ್, “ಮರವಿದ್ದರೆ ನೆರಳು ನೀಡುತ್ತದೆ, ಕಡಿಸಬೇಡಿ” ಎಂದು ಹೇಳಿದಾಗ, ರಸ್ತೆ ಬಿಡಿಸಲು ಮರವನ್ನು ಕಡಿಯಲು ಯತ್ನಿಸಲಾಗಿತ್ತು. ಇದರಿಂದ ಸಿಟ್ಟಿಗೆದ್ದ ಸುರೇಶ್ ಗೌಡ, “ನೀನ್ಯಾರು ನನ್ನನ್ನು ಪ್ರಶ್ನಿಸಲು?” ಎಂದು ಆಕ್ರೋಶಗೊಂಡು ಮಚ್ಚಿಯಿಂದ ಹಲ್ಲೆ ನಡೆಸಿದ್ದಾನೆ.
ಈ ಹಲ್ಲೆಯಿಂದ ಬಿಎಂಟಿಸಿ ನೌಕರ ಸುರೇಶ್ ಅವರ ಕೈ ಮತ್ತು ಕಿವಿಗೆ ಗಾಯವಾಗಿದ್ದು, ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.