
ರಾಯಚೂರು: ಶಾಲೆಯ ಬಾಗಿಲ ಮುಂದೆ ಮದ್ಯಪಾನ ಮಾಡಿ ನಿದ್ದೆಗೆ ಜಾರಿದ ಮುಖ್ಯ ಶಿಕ್ಷಕ!
ಮಸ್ಕಿ ತಾಲ್ಲೂಕಿನ ಗೋನಾಳ ಗ್ರಾಮದ ಅಂಬಾದೇವಿ ನಗರದಲ್ಲಿ ಎದೆಯ ನಾಚಿಕೆಗೇಡಾದ ಘಟನೆ ನಡೆದಿದೆ. ಅಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನಿಂಗಪ್ಪ ಅವರು ಮದ್ಯಪಾನ ಮಾಡಿರುವ ಸ್ಥಿತಿಯಲ್ಲಿ ಶಾಲೆಗೆ ಬಂದು, ಬಾಗಿಲ ಮುಂದೆಯೇ ನಿದ್ದೆಗೆ ಜಾರಿದ್ದಾರೆ.
ಈ ಘಟನೆಯು ಶಾಲೆಯ ಶಿಸ್ತು ಮತ್ತು ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಉಂಟುಮಾಡುವಂತದ್ದಾಗಿ ಪೋಷಕರು ಹಾಗೂ ಸ್ಥಳೀಯರು ಖಂಡಿಸಿದ್ದಾರೆ. ಅವರು ಈ ಹಿಂದೆ ಕೂಡ ಹಲವಾರು ಬಾರಿ ಮದ್ಯಪಾನ ಮಾಡಿ ಶಾಲೆಗೆ ಹಾಜರಾಗಿದ್ದರೆಂದು ಸ್ಥಳೀಯ ಮೂಲಗಳು ತಿಳಿಸುತ್ತಿವೆ.
ತರಗತಿ ವೇಳೆಯಲ್ಲಿ ನಡೆಯುವ ಈ ಅವ್ಯವಸ್ಥೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಶಿಕ್ಷಕನನ್ನು ಅಮಾನತುಗೊಳಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಲು ಪೋಷಕರು ಮತ್ತು ಗ್ರಾಮಸ್ಥರು ಒತ್ತಾಯಿಸಿದ್ದಾರೆ.