
ಬಂಟ್ವಾಳ: ಮದುವೆಗೆ ನಿರಾಕರಿಸಿದ ಪ್ರೇಯಸಿಗೆ ಚೂರಿ ಇರಿತ – ನಂತರ ಆತ್ಮಹತ್ಯೆಗೆ ಶರಣಾದ ಪ್ರೇಮಿ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಳಿ ಮನವಿ ನಿರಾಕರಿಸಿದ ಪ್ರೇಯಸಿಗೆ ಚೂರಿಯಿಂದ ಇರಿದು, ಬಳಿಕ ಆಕೆಯ ಬಾಡಿಗೆ ಮನೆಯಲ್ಲಿಯೇ ಪ್ರೇಮಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ವರದಿಯಾಗಿದೆ.
ಸಾವನ್ನಪ್ಪಿದ ಯುವಕನನ್ನು ಕೊಡ್ಮಣ್ ನಿವಾಸಿ ಸುಧೀರ್ (30) ಎಂದು ಗುರುತಿಸಲಾಗಿದ್ದು, ಗಾಯಗೊಂಡ ಯುವತಿಯು ಫರಂಗಿಪೇಟೆ ನಿವಾಸಿ ದಿವ್ಯಾ ಯಾನೆ ದೀಕ್ಷಿತಾ (26) ಎಂದು ತಿಳಿದುಬಂದಿದೆ.

ಮಾಹಿತಿಯ ಪ್ರಕಾರ, ಸುಧೀರ್ ಹಾಗೂ ದೀಕ್ಷಿತಾ ಕಳೆದ 8 ವರ್ಷಗಳಿಂದ ಪ್ರೇಮ ಸಂಬಂಧದಲ್ಲಿದ್ದರಾದರೂ ಇತ್ತೀಚೆಗೆ ಇಬ್ಬರ ನಡುವೆ ಅಸಮಾಧಾನ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ದೀಕ್ಷಿತಾ, ಮದುವೆಗೆ ಸ್ಪಷ್ಟವಾಗಿ ನಿರಾಕರಣೆ ನೀಡಿದ್ದಳು.
ಈ ನಿರಾಕರಣೆಯಿಂದ ಆಕ್ರೋಶಗೊಂಡ ಸುಧೀರ್, ದೀಕ್ಷಿತಾಳ ಬಾಡಿಗೆ ಮನೆಗೆ ಬಂದು ಜಗಳವಾಡಿದ್ದ. ಬಳಿಕ ಆಕೆ ಮದುವೆ ಆಗಲಿಕ್ಕಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾಳೆ. ಇದರಿಂದ ಬೇಸತ್ತು, ಸುಧೀರ್ ಆಕೆಗೆ ಚೂರಿಯಿಂದ ಇರಿದು ಹಲ್ಲೆ ನಡೆಸಿದ್ದಾನೆ. ಗಾಯಗೊಂಡ ದೀಕ್ಷಿತಾ ಅಚ್ಚರಿಯೊಂದಿಗೆ ತಪ್ಪಿಸಿಕೊಂಡು ಬಿದ್ದುಬಿಟ್ಟಿದ್ದಳು.
ದೀಕ್ಷಿತಾ ಮೃತಪಟ್ಟಿದ್ದಾಳೆ ಎಂಬ ಭಾವನೆಯಿಂದ ಆತಂಕಗೊಂಡ ಸುಧೀರ್, ಅದೇ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.