August 3, 2025
Screenshot_20250727_1537172-640x413

ಕಾಪು: ಉಡುಪಿ ಜಿಲ್ಲೆಯ ಕಾಪು ಸಮೀಪದ ಪ್ರದೇಶದಲ್ಲಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತರ್‌ಜಿಲ್ಲಾ ಮಟ್ಟದ ಕುಖ್ಯಾತ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಅಬೂಬಕ್ಕರ್ @ ಅಬ್ದುಲ್ ಖಾದರ್ @ ಇತ್ತೆ ಬರ್ಪೆ ಅಬೂಬಕ್ಕರ್ ಎಂದು ಗುರುತಿಸಲಾಗಿದೆ. ಈತನ ವಿರುದ್ಧ 30 ಕ್ಕಿಂತ ಹೆಚ್ಚು ಕಳ್ಳತನದ ಪ್ರಕರಣಗಳು ದಾಖಲಾಗಿವೆ.

ಪ್ರಕರಣದ ಹಿನ್ನೆಲೆ: 2025ರ ಜೂನ್ 27ರ ರಾತ್ರಿ ಶಿರ್ವ ಗ್ರಾಮದ ಮಟ್ಟಾರು ರಸ್ತೆಯಲ್ಲಿರುವ ಪವಿತ್ರ ಪೂಜಾರ್ತಿಯವರ ಮನೆಯ ಕಿಟಕಿ ಹೂಕ್ಸ್ ಮುರಿದು, ಬಾಗಿಲಿನ ಚಿಲಕವನ್ನು ಕಬ್ಬಿಣದ ರಾಡ್‌ನಿಂದ ಎಳೆದು ತೆರೆಯಲಾಗಿತ್ತು. ಮನೆಯೊಳಗೆ ಪ್ರವೇಶಿಸಿದ ಕಳ್ಳರು ಸುಮಾರು 137 ಗ್ರಾಂ ತೂಕದ ಚಿನ್ನಾಭರಣಗಳನ್ನು (ಅಂದಾಜು ಮೌಲ್ಯ 12,75,000/-) ದೋಚಿದ್ದರು. ಈ ಸಂಬಂಧ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಶ್ರೀಮತಿ ಪವಿತ್ರ ಪೂಜಾರ್ತಿಯವರು ಕಳವಾದ ಚಿನ್ನದ ಬಗ್ಗೆ ಕಂಪನಬೆಟ್ಟು ಉದ್ಯಾವರ ಶ್ರೀ ಬಬ್ಬುಸ್ವಾಮಿಯ ದರ್ಶನ ಸೇವೆಯ ದಿನ ದೈವದ ಹತ್ತಿರ ದೂರನ್ನು ನೀಡಿದ್ದರು.ದೈವವು ಅವರಿಗೆ 15 ರಿಂದ 20 ದಿನದ ಒಳಗೆ ಕಳ್ಳನನ್ನು ತೋರಿಸಿ ಕೊಡುವೆ ಎಂದು ಅಭಯದ ನುಡಿಯನ್ನು ನೀಡಿತ್ತು. ಅದರಂತೆ ಕಳ್ಳ ಪೋಲೀಸರ ಕೈಗೆ ಸಿಕ್ಕಿದ್ದಾನೆ.ಮತ್ತೊಮ್ಮೆ ಕಂಪನಬೆಟ್ಟು ಉದ್ಯಾವರದ ಶ್ರೀ ಬಬ್ಬುಸ್ವಾಮಿಯು ತನ್ನ ಕಾರ್ಣಿಕವನ್ನು ಮೆರೆದಿದ್ದಾರೆ.ಮತ್ತು ಭಕ್ತರಿಗೆ ತನ್ನ ಇರುವಿಕೆಯನ್ನು ತೋರಿಸಿ ಭಕ್ತರ ಕಷ್ಟಗಳನ್ನು ಪರಿಹರಿಸಿಕೊಂಡು ಬಂದಿದ್ದಾರೆ.

ಪೊಲೀಸರು ಪ್ರಕರಣದ ಸ್ಥಳ ಪರಿಶೀಲಿಸಿ, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಅವರ ಮಾರ್ಗದರ್ಶನದಲ್ಲಿ ತನಿಖೆ ಮುಂದುವರೆಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ಎಸ್. ನಾಯ್ಕ್ ಮತ್ತು ಕಾರ್ಕಳ ಉಪ ಪೊಲೀಸ್ ಅಧೀಕ್ಷಕ ಡಾ. ಹರ್ಷ ಪ್ರಿಯಂವದ ಅವರ ನೇತೃತ್ವದಲ್ಲಿ ಕಾಪು ವೃತ್ತ ನಿರೀಕ್ಷಕ ಜಯಶ್ರೀ ಎಸ್. ಮಾನೆ ಅವರ ಅಧೀನದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ಪೊಲೀಸರು ಆರೋಪಿಯನ್ನು ಬಂಧಿಸಿ, ಅವನಿಂದ 66.760 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ ಕೃತ್ಯದ ವೇಳೆಯಲ್ಲಿ ಬಳಸಲಾದ ಜುಪಿಟರ್ ಸ್ಕೂಟರನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಆಸ್ತಿ ಒಟ್ಟು ಮೌಲ್ಯ ಸುಮಾರು 7,00,000/- ಆಗಿದೆ.

ಕಾರ್ಯಾಚರಣೆಯಲ್ಲಿ ಭಾಗವಹಿಸಿದವರು:
– ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಎಸ್. ಮಾನೆ
– ಶಿರ್ವ ಠಾಣೆಯ ಉಪನಿರೀಕ್ಷಕ ಮಂಜುನಾಥ ಮರಬದ ಮತ್ತು ಲೋಹಿತ್ ಕುಮಾರ್ ಎಸ್
– ಪಡುಬಿದ್ರೆ ಉಪನಿರೀಕ್ಷಕ ಅನಿಲ್ ಕುಮಾರ್ ಟಿ ನಾಯ್ಕ್
– ಕಾಪು ಉಪನಿರೀಕ್ಷಕ ಮಹೇಶ್ ಟಿ ಎಂ
– ಸಿಬ್ಬಂದಿ: ಮಂಜುನಾಥ ಅಡಿಗ, ಅನ್ವರ್ ಆಲಿ, ಸಿದ್ಧರಾಯಪ್ಪ, ಕಿರಣ್, ಮಂಜುನಾಥ ಹೊಸಮನಿ, ಬಸವರಾಜ್, ಪ್ರಕಾಶ್ ಸುವರ್ಣ, ಶ್ರೀಧರ್ ಶೆಟ್ಟಿಗಾರ್
– ವೃತ್ತ ಕಚೇರಿ ಸಿಬ್ಬಂದಿ: ರಿಯಾಜ್ ಅಹ್ಮದ್, ಶರಣಪ್ಪ, ಜೀವನ್, ಪಾವನಾಂಗಿ, ದಿನೇಶ್
– ವಾಹನ ಚಾಲಕರು: ಜಗದೀಶ್, ಪ್ರಕಾಶ್

error: Content is protected !!