
ಮಣಿಪಾಲ: ಉಡುಪಿ ಜಿಲ್ಲೆಯ ಮಣಿಪಾಲದಲ್ಲಿರುವ ಕಾಲೇಜೊಂದರ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ನಾಪತ್ತೆಯಾದ ವಿದ್ಯಾರ್ಥಿಯನ್ನು ಸಿದ್ದಾರ್ಥ್ ಕಾರ್ವಾಲ್ (23) ಎಂದು ಗುರುತಿಸಲಾಗಿದೆ. ಅವರು ರಾಜಸ್ಥಾನ ಮೂಲದ ಜೀತೇಂದ್ರ ಕುಮಾರ್ ಅವರ ಪುತ್ರರಾಗಿದ್ದಾರೆ.
ಮಣಿಪಾಲದ MSAP ಹಾಸ್ಟೆಲ್‌ನಲ್ಲಿ ವಾಸವಿದ್ದ ಸಿದ್ದಾರ್ಥ್, ಜುಲೈ 6 ರಂದು ರಾತ್ರಿ 10:30ರ ಸುಮಾರಿಗೆ ಹಾಸ್ಟೆಲ್ ಬಿಟ್ಟು ಹೋದ ಬಳಿಕ ಮರುಪಡೆ ಕಾಣೆಯಾಗಿದ್ದಾರೆ. ಅವರ ತಂದೆ ಜೀತೇಂದ್ರ ಕುಮಾರ್ ಅವರು ಜುಲೈ 7 ರಂದು ಬೆಳಿಗ್ಗೆ 8 ಗಂಟೆಗೆ ಹಾಸ್ಟೆಲ್‌ಗೆ ಬೇಟಿ ನೀಡಿದಾಗ, ಸಿದ್ದಾರ್ಥ್ ಹಾಸ್ಟೆಲ್‌ನ ರೂಮ್‌ನಲ್ಲಿ ಇಲ್ಲದಿರುವುದು ಗೊತ್ತಾಗಿದೆ. ಆದರೆ ಅವರ ಬಟ್ಟೆ ಹಾಗೂ ಮೊಬೈಲ್ ರೂಮ್‌ನಲ್ಲೇ ಇತ್ತು.
ನಂತರ ಹಾಸ್ಟೆಲ್‌ನ ಬ್ಲಾಕ್ 10 ಕೇರಟೇಕರ್ ಅವರನ್ನು ವಿಚಾರಿಸಿದಾಗ, ಸಿದ್ದಾರ್ಥ್ ಅವರು ಜುಲೈ 6ರಂದು ರಾತ್ರಿ ಹೊರಗೆ ಹೋದ ಬಳಿಕ ಮರಳಿ ಬಾರದೇ ಇರುವುದಾಗಿ ಮಾಹಿತಿ ದೊರೆತಿದೆ. ಅವರು ತಮ್ಮ ಊರಿಗೆ ಸಹ ಹೋಗಿಲ್ಲ ಎಂಬುದಾಗಿ ಪೋಷಕರು ತಿಳಿಸಿದ್ದಾರೆ.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಾಧ ಸಂಖ್ಯೆ 124/2025ರಂತೆ IPC ಸೆಕ್ಷನ್ “ಗಂಡಸು ಕಾಣೆಯಾಗಿದೆ” ಎಂಬ ಅನ್ವಯವಾಗಿ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.